ಲೈಂಗಿಕ ದೌರ್ಜನ್ಯ, ಕೇರಳ ನ್ಯಾಯಾಲಯದ ಸೂಚನೆ ಮೇರೆಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

ವಿಟ್ಲ: ಮಂಜೇಶ್ವರ ಠಾಣೆಯಲ್ಲಿ ವರ್ಷದ ಹಿಂದೆ ದಾಖಲಾದ ಪ್ರಕರಣವೊಂದರಲ್ಲಿ ಕೃತ್ಯ ಕರ್ನಾಟಕ ಭೂಪ್ರದೇಶದಲ್ಲಿ ನಡೆದಿದೆ ಎಂಬ ಕಾರಣಕ್ಕೆ ವಿಟ್ಲ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಮಂಜೇಶ್ವರ ಪಾವೂರು ನಿವಾಸಿ ದೀಕ್ಷಿತ್ (23) ಮೇಲೆ ಪ್ರಕರಣ ದಾಖಲಾಗಿದೆ. ೨೦೨೦ರ ಮಾರ್ಚ್ ನಲ್ಲಿ ೧೭ ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದಿದ್ದು, ಸಂತ್ರಸ್ತೆ ಕೃತ್ಯ ನಡೆದ ಒಂದು ವಾರದ ಬಳಿಕ ಚೈಲ್ಡ್ ಲೈನ್ ಸದಸ್ಯೆಯ ಮೂಲಕ ಮಂಜೇಶ್ವರ ಠಾಣೆಯಲ್ಲಿ ಸಂತ್ರಸ್ತೆ ಸಹೋದರ ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ೨೦೨೦ರ ಮಾರ್ಚ್ ೨೯ರಂದು ಕರೋಪಾಡಿ ಗ್ರಾಮದಲ್ಲಿಯೂ ಅತ್ಯಾಚಾರ ಎಸಗಿದ ಬಗ್ಗೆ ತಿಳಿದು ಬಂದಿದೆ.
ಈ ಹಿನ್ನಲೆಯಲ್ಲಿ ನ್ಯಾಯಾಲಯ ಕರ್ನಾಟಕದಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಬೇಕೆಂದು ಸೂಚನೆ ನೀಡಿದ ಹಿನ್ನಲೆ ಕೇರಳ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದು, ಪೊಲೀಸ್ ಮಹಾ ನಿರ್ದೇಶಕರ ಮುಖಾಂತರ ವಿಟ್ಲ ಠಾಣೆಗೆ ಅ.೨೯ರಂದು ದೂರು ಬಂದಿದ್ದು, ವಿಟ್ಲ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.