August 20, 2026

ಕೋಲಾ ಪೂಜೆ ವೇಳೆ ಗಲಾಟೆ: ಮೂವರಿಗೆ ಗುಂಡೇಟು

0
Screenshot_2022-04-12-04-50-28-63_680d03679600f7af0b4c700c6b270fe7.jpg

ಕೊಡಗು: ಕೋಲಾ ಪೂಜೆ ವೇಳೆ ಸಂಭವಿಸಿದ ಗಲಾಟೆ ವೇಳೆ ಬಂದೂಕು ಮಾರ್ಧನಿಸಿದ್ದು, ಮೂವರಿಗೆ ಗುಂಡೇಟು ತಗುಲಿದೆ ಎಂದು ತಿಳಿದುಬಂದಿದೆ.

ಕೊಡಗಿನ ಸೋಮವಾರ ಪೇಟೆ ತಾಲ್ಲೂಕಿನ ನಗರಳ್ಳಿ ಗ್ರಾಮದಲ್ಲಿ ಐದು ಕುಟುಂಬಸ್ಥರು ಸೇರಿ ನಡೆಸುವ ಕೋಲಾ ಪೂಜೆಯ ವೇಳೆ ಕುಟುಂಬಸ್ಥರ ನಡುವೆಯೇ ನಡೆದ ಗಲಾಟೆಯು, ಸೋಮವಾರ ಸಂಜೆ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬರು ರಿವಾಲ್ವಾರ್‌ನಿಂದ ಗುಂಡು ಹಾರಿಸಿದ್ದಾರೆ. ಪರಿಣಾಮ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಗ್ರಾಮದಲ್ಲಿ 12 ವರ್ಷಗಳ ಬಳಿಕ ಗ್ರಾಮದಲ್ಲಿ ಈ ಕೋಲಾ ಪೂಜೆ ಆಯೋಜಿಸಲಾಗಿತ್ತು. ಪೂಜೆಯ ವೇಳೆ ನಡೆದ ಗಲಾಟೆಯಲ್ಲಿ ಕೆಲವರು ವೀರೇಶ್ ಎಂಬುವರ ಮೇಲೆ ಹಲ್ಲೆ ಮಾಡಿದರು ಎನ್ನಲಾಗಿದೆ.

ಆಗ ವೀರೇಶ್‌ ಹಾರಿಸಿದ ಗುಂಡೇಟಿಗೆ ಕುಟುಂಬದ ಮಹೇಶ್, ನಂದೀಶ್, ಚಂದ್ರಶೇಖರ್ ಎಂಬುವವರು ಗಾಯಗೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಮಹೇಶ್ ಅವರಿಗೆ ಸೊಂಟದ ಕೆಳಭಾಗಕ್ಕೆ ಗುಂಡೇಟು ತಗುಲಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

ಮತ್ತಿಬ್ಬರ ಕೈಗೆ ಗುಂಡೇಟು ತಗುಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿಯ ಮೇಲೂ ಹಲ್ಲೆಯ ಗಾಯಗಳಾಗಿವೆ. 

ಪ್ರಸ್ತುತ ಗುಂಡೇಟು ತಗುಲಿದ ಮೂವರನ್ನೂ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. 

Leave a Reply

Your email address will not be published. Required fields are marked *

You may have missed

error: Content is protected !!