ಪುನೀತ್ ರಾಜ್ ಕುಮಾರ್ ನಿಧನ ಗೌರವಾರ್ಥ ಸ್ವಯಂ ಪ್ರೇರಿತ ಚಾಮರಾಜನಗರ ಬಂದ್

ಚಾಮರಾಜನಗರ: ಅಗಲಿದ ಚಿತ್ರನಟ ಪುನೀತ್ ರಾಜ್ ಕುಮಾರ್ ಗೌರವಾರ್ಥ ಅಭಿಮಾನಿಗಳು ಮನವಿ ಮಾಡಿದ್ದ ಸ್ವಯಂ ಪ್ರೇರಿತ ಚಾಮರಾಜನಗರ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ತವರು ಜಿಲ್ಲೆಯ ಜನತೆ ಬಂದ್ ನಡೆಸಿ ತಮ್ಮೂರಿನ ಕಲಾವಿದನಿಗೆ ಶ್ರದ್ದಾಂಜಲಿ ಸಲ್ಲಿಸಿದರು.
ನಗರದ ಪ್ರಮುಖ ವಾಣಿಜ್ಯ ವಹಿವಾಟು ಸ್ಥಳವಾದ ದೊಡ್ಡ ಅಂಗಡಿ, ಚಿಕ್ಕಂಗಡಿ ಬೀದಿಯಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.