March 19, 2026

ಮೇಕೆದಾಟು ಯೋಜನೆ ತಡೆಗೆ ತಮಿಳುನಾಡು ಸರಕಾರ ಬದ್ಧ

0
image_editor_output_image1211503539-1649287461978.jpg

ಚೆನ್ನೈ: ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಾಣ ಮಾಡಲು ಕರ್ನಾಟಕ ಮುಂದಾದರೆ ಅದು ಕಾವೇರಿ ನದಿ ನೀರು ನ್ಯಾಯ ಮಂಡಳಿ ಮತ್ತು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದ ಉಲ್ಲಂಘನೆ ಆಗಲಿದೆ ಎಂದು ತಮಿಳುನಾಡು ಬುಧವಾರ ಹೇಳಿದೆ.

ಕರ್ನಾಟಕವು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರದಂತೆ ತಡೆಯಲು ಅಗತ್ಯ ಕ್ರಮಗಳನ್ನು ತಮಿಳುನಾಡು ಸರ್ಕಾರವು ತೆಗೆದುಕೊಳ್ಳುತ್ತಿದೆ ಎಂದು ಅದು ಪುನರುಚ್ಚರಿಸಿದೆ.

ಈ ಕುರಿತು ಸದನದಲ್ಲಿ ಮಾತನಾಡಿದ ರಾಜ್ಯ ಜಲ ಸಂಪನ್ಮೂಲ ಸಚಿವ ದೊರೆ ಮುರುಗನ್‌, ಅಂತರರಾಜ್ಯ ನದಿ ನೀರು ವಿವಾದದಲ್ಲಿ ತಮಿಳುನಾಡಿನ ಹಕ್ಕುಗಳಿಗಾಗಿ ಡಿಎಂಕೆ ಸರ್ಕಾರ ಹೋರಾಡಲಿದೆ. ಅಣೆಕಟ್ಟು ನಿರ್ಮಾಣ ತಡೆಯಲು ಸರ್ಕಾರ ಬದ್ಧವಾಗಿದೆ ಎಂದು ರಾಜ್ಯದ ಜನರಿಗೆ ಆಶ್ವಾಸನೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!