August 21, 2026

ಪುರಿ ಜಗನ್ನಾಥ ದೇಗುಲದ ಧ್ವಂಸ: ಆರೋಪಿ ಮಹೋಪಾತ್ರನ ಬಂಧನ

0
Screenshot_2022-04-07-04-59-33-20_680d03679600f7af0b4c700c6b270fe7.jpg

ಭುವನೇಶ್ವರ: ಒಡಿಶಾದ ಪ್ರಸಿದ್ಧ ಪವಿತ್ರ ಕ್ಷೇತ್ರವಾದ ಪುರಿ ಜಗನ್ನಾಥ ದೇಗುಲದ ಅಡುಗೆ ಮನೆಯಲ್ಲಿದ್ದ ಒಲೆಗಳನ್ನು ಧ್ವಂಸ ಮಾಡಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆತನನ್ನು ಜೆ.ಮಹೋಪಾತ್ರ ಎಂದು ಗುರುತಿಸಲಾಗಿದೆ. ಘಟನೆ ನಡೆದ ದಿನ ಆತ ದೇವಸ್ಥಾನಕ್ಕೆ ತೆರಳಿ, ಅಡುಗೆ ಮನೆಯೊಳಗೆ ತೆರಳಿದ್ದಾನೆ. ಅಲ್ಲಿ ದೇವರಿಗೆ ಮಹಾಪ್ರಸಾದ ಮಾಡಲು ಬಳಸಲಾಗುತ್ತಿದ್ದ 40 ಮಣ್ಣಿನ ಒಲೆಗಳನ್ನು ಹಾಳುಗೆಡವಿದ್ದಾನೆ.

ಭದ್ರತಾ ಸಿಬ್ಬಂದಿ ತಡೆಯಲು ಹೋದಾಗ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮನಸ್ಸಿನಲ್ಲಿ ಸಾಕಷ್ಟು ನೋವು ತುಂಬಿಕೊಂಡು, ಜೀವನ ಕಷ್ಟ ಎನಿಸಿದ್ದರಿಂದಾಗಿ ಈ ರೀತಿ ಮಾಡಿದ್ದಾಗಿ ಆತ ಹೇಳಿಕೊಂಡಿದ್ದಾನೆ.

Leave a Reply

Your email address will not be published. Required fields are marked *

You may have missed

error: Content is protected !!