March 19, 2026

ಮಂಗಳೂರು: ಕೆಫೆಯಲ್ಲಿ ಮೂವರು ವಿದ್ಯಾರ್ಥಿನಿಯರು ಹೊಡೆದಾಟ: ಗಲಾಟೆ ನಿಲ್ಲಿಸಲು ಪರದಾಡಿದ ಯುವಕರು: ವೀಡಿಯೋ ವೈರಲ್

0
image_editor_output_image334014732-1649157070947

ಮಂಗಳೂರು: ನಗರದ ಬಾವುಟಗುಡ್ಡೆ ಬಳಿಯ ಕೆಫೆಯೊಂದರಲ್ಲಿ ಮೂವರು ವಿದ್ಯಾರ್ಥಿನಿಯರ ಹೊಡೆದಾಟ ಮಾಡಿಕೊಂಡ ಘಟನೆ ನಡೆದಿದೆ. ಸದ್ಯ ಹೊಡೆದಾಟದ ವೀಡಿಯೋ ವೈರಲ್‌ ಆಗಿದೆ.

ಯುವಕರ ಜೊತೆ ಕೆಫೆಯಲ್ಲಿ ಕುಳಿತಿದ್ದ ಯುವತಿ ಮೇಲೆ ಕೆಫೆಗೆ ಆಗಮಿಸಿದ ಓರ್ವ ಯುವತಿ ಏಕಾಏಕಿ ಹಲ್ಲೆ ನಡೆಸಿದ್ದಾಳೆ.

ಈ ವೇಳೆ ಕೆಫೆಯಲ್ಲಿ ಕುಳಿತಿದ್ದ ಮತ್ತೊಬ್ಬ ಯುವತಿ ಗಲಾಟೆ ಆರಂಭಿಸಿದ್ದಾರೆ. ಹೀಗೆ ಒಟ್ಟು ಮೂವರು ಯುವತಿಯರ ನಡುವೆ ಹೊಡೆದಾಟ ಶುರುವಾಗಿದೆ.

ಈ ಜಗಳ ಬಿಡಿಸಲು ಯುವಕರು ಪರದಾಡುವಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಜಗಳದ ವಿಡಿಯೋ ವೈರಲ್ ಆಗಿದ್ದು, ಯುವತಿಯರ ಜಗಳದ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!