March 19, 2026

ಉಪ್ಪಿನಂಗಡಿ: ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದ ವಿಭಿನ್ನ ಕೋಮಿಗೆ ಸೇರಿದ ಜೋಡಿಯನ್ನು ತಡೆದು ಯುವಕನಿಗೆ ಹಲ್ಲೆ ಪ್ರಕರಣ: ಹಲ್ಲೆ ನಡೆಸಿದ ಇಬ್ಬರು ಯುವಕರ ಬಂಧನ

0
image_editor_output_image-1484425139-1649176032543

ಉಪ್ಪಿನಂಗಡಿ: ಕಡಬದ ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿ ಹಿಂದೂ ಸಮುದಾಯದ ಯುವತಿಯನ್ನು ರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಹಿಂದೂಪರ ಸಂಘಟನೆಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಿಕ್ಷಾದಲ್ಲಿದ್ದ ಸಂಪ್ಯ ನಿವಾಸಿ ನಜೀರ್ ಎಂಬಾತ ನೀಡಿದ ದೂರಿನಂತೆ
ಸುರೇಂದ್ರ, ತೀರ್ಥ ಪ್ರಸಾದ್‌, ಜಿತೇಶ್‌ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಿರಿಬಾಗಿಲು ನಿವಾಸಿ ಬಾಲಚಂದ್ರ ಮತ್ತು ರಂಜಿತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ನಝೀರ್ ಅಟೋರಿಕ್ಷಾದಲ್ಲಿ ತಾನು ಪ್ರೀತಿ ಮಾಡುತ್ತಿದ್ದ ಹುಡುಗಿಯನ್ನು ಕುಳ್ಳಿರಿಸಿಕೊಂಡು ಉಪ್ಪಿನಂಗಡಿಯಿಂದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಗುಂಡ್ಯಕ್ಕೆಬಂದು ಗುಂಡ್ಯದಿಂದ ಸುಬ್ರಹ್ಮಣ್ಯ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದರು.

ಈ ಸಂದರ್ಭ ಸುರೇಂದ್ರ, ತೀರ್ಥಪ್ರಸಾದ್‌ ಜಿತೇಶ್‌ ಮತ್ತು ಇತರರು ಪಿ ಅಟೋರಿಕ್ಷಾವನ್ನು ತಡೆದು ನಿಲ್ಲಿಸಿ ನಝೀರ್ ನನ್ನು ನೀವು ಎಲ್ಲಿಗೆ ಹೋಗುತ್ತಿದ್ದೀರಿ ? ನಿಮ್ಮ ಹೆಸರೇನು ಎಂದು ಕೇಳಿದಾಗ ಅವರು ಹೆಸರನ್ನು ಹೇಳಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ಕೈಯಿಂದ ಮುಖಕ್ಕೆ ತಲೆಗೆ ಕೈಯಿಂದ ಯದ್ವಾತದ್ವಾ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ನಝೀರ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!