February 1, 2026

ಪ್ಲಾಸ್ಟಿಕ್‌ ಕಾರ್ಖಾನೆಯಲ್ಲಿ ಯಂತ್ರದ ಬೆಲ್ಟ್ ಗೆ ಸಿಲುಕಿ ಯುವತಿ‌ ಮೃತ್ಯು

0
image_editor_output_image-1521723986-1649027607862.jpg

ಬೆಂಗಳೂರು:  ಪ್ಲಾಸ್ಟಿಕ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯಂತ್ರದ ಬೆಲ್ಟ್ ಗೆ ಯುವತಿಗೆ ವೇಲ್‌ ಸಿಲುಕಿದ ಪರಿಣಾಮ, ಯಂತ್ರದ ಮೇಲೆ ಬಿದ್ದು ಸಾವನ್ನಪ್ಪಿರುವ ಘಟನೆ ನಾಯಂಡಹಳ್ಳಿಯಲ್ಲಿ ಜರುಗಿದೆ.

ಗಂಗೊಡನಹಳ್ಳಿ ನಿವಾಸಿ ಸಾಜಿಯಾ ಭಾನು (28) ಮೃತ ಯುವತಿ. ಸಾಜಿಯಾ ತಾಯಿ ನಝೀಮಾ ಕೊಟ್ಟ ದೂರಿನ ಆಧಾರದ ಮೇಲೆ ಚಂದ್ರಲೇಔಟ್‌ ಪೊಲೀಸರು ಕಾರ್ಖಾನೆ ಮಾಲೀಕ ಜಿಸಾಹಂ (31) ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ನಾಯಂಡಹಳ್ಳಿಯ ಅಜಿಜ್‌ ಸೈತ್‌ ಕೈಗಾರಿಕಾ ಪ್ರದೇಶದಲ್ಲಿರುವ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ತುಂಡರಿಸಿ ಮರು ಬಳಕೆ ಮಾಡುವ ಕಾರ್ಖಾನೆಯಲ್ಲಿ ಸಾಜಿಯಾ ಕಳೆದ 2 ತಿಂಗಳಿಂದ ಕೆಲಸ ಮಾಡುತ್ತಿದ್ದರು. ಶನಿವಾರ ಸಂಜೆ 5.15ರಲ್ಲಿ ಯಂತ್ರವನ್ನು ಆಫ್‌ ಮಾಡಲು ಮುಂದಾದ ವೇಳೆ ಇವರು ಧರಿಸಿದ್ದ ವೇಲ್‌ ಯಂತ್ರದ ಬೆಲ್ಟ್ಗೆ ಸಿಲುಕಿತ್ತು. ಪರಿಣಾಮ ಯಂತ್ರದ ರಿಮ್‌ಗೆ ಸಾಜಿಯಾ ಭಾನು ತಲೆ ತಾಗಿ ಗಂಭೀರವಾಗಿ ಗಾಯಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!