ಬೆಳಗಾವಿ: ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ನಿಧನದಿಂದ ನೊಂದ ಅಭಿಮಾನಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ.
ರಾಹುಲ್ ಗಾಡಿವಡ್ಡರ (26) ಮೃತ. ಪುನೀತ್ ರಾಜ್‌ಕುಮಾರ್ ಫೋಟೊಗೆ ಪೂಜೆ ಸಲ್ಲಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುನೀತ್ ಸಾವಿನಿಂದ ಅವರು ನೊಂದಿದ್ದರು ಎಂದು ತಿಳಿದುಬಂದಿದೆ.
