March 19, 2026

ಬೆಳ್ತಂಗಡಿ: ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ, ಎಸ್ಡಿಪಿ ಐ ಮುಖಂಡರ ವಿರುದ್ಧ ಪ್ರಕರಣ ದಾಖಲು

0
Screenshot_2022-04-01-10-26-59-84_680d03679600f7af0b4c700c6b270fe7.jpg

ಬೆಳ್ತಂಗಡಿ: ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಬಗ್ಗೆ ಬೆಳ್ತಂಗಡಿ ತಹಶೀಲ್ದಾರ್ ನೀಡಿರುವ ದೂರಿನಂತೆ ಎಸ್ ಡಿ ಪಿ ಐ ಪಕ್ಷದ ಮುಖಂಡರ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಲಾಗಿದೆ.

ಜಿಲ್ಲಾಧಿಕಾರಿಯವರು ಘೋಷಿಸಿದ ನಿಷೇದಾಜ್ಞೆ ಜಾರಿಯಾಲ್ಲಿರುವಾಗಲೇ ಮಾ.29ರಂದು ಬೆಳ್ತಂಗಡಿ ಬಸ್ ನಿಲ್ದಾಣದ ಸಮೀಪ ಕಾನೂನನ್ನು ಮೀರಿ ಕೂಟ ಸೇರಿ ಧ್ವನಿವರ್ಧಕ ಉಪಯೋಗಿಸಿ ಮೆರವಣಿಗೆ ನಡೆಸಿ ಕಾನೂನು ಉಲ್ಲಂಘಿಸಿರುವ ಬಗ್ಗೆ ತಹಶೀಲ್ದಾರ್ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಕಲಂ143,188 ಜತೆಗೆ 149ಐಪಿಸಿ ಹಾಗೂ 34, 36 ,107, 109 ಕೆಪಿ ಆಕ್ಟ್ ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮಾ.29 ರಂದು ಕನ್ಯಾಡಿ ದಿನೇಶ್ ಕೊಲೆ ಖಂಡಿಸಿ ಎಸ್ ಡಿ ಪಿ ಐ ಪಕ್ಷದ ಮುಖಂಡರು ಬೆಳ್ತಂಗಡಿಯಿಂದ ಮಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!