February 1, 2026

ಮೂರು ತಿಂಗಳ ಹೆಣ್ಣು ಮಗುವನ್ನು ಕೊಂದ ಪೋಷಕರು

0
image_editor_output_image940303854-1648723934704.jpg

ಪಂಜಾಬ್: ಪಂಜಾಬ್‌ನ ನಭಾದ ಪಾಂಡುಸರ್ ಪ್ರದೇಶದಲ್ಲಿ ಪೋಷಕರು ತಮ್ಮ ಮೂರು ತಿಂಗಳ ಹೆಣ್ಣು ಮಗುವನ್ನು ಗೋಡೆಯ ಮೇಲೆ ಹೊಡೆದು ಕೊಂದಿರುವ ಘಟನೆ ನಡೆದಿದೆ.

ಮೃತ ಮಗುವನ್ನು ಪರಿ ಎಂದು ಗುರುತಿಸಲಾಗಿದ್ದು, ಈ ಬಗ್ಗೆ ಮಗುವಿನ ಅಜ್ಜ ಸಂಜೀವ್ ಕುಮಾರ್ ಮತ್ತು ಅಜ್ಜಿ ಮೋನಾ ರಾಣಿ ಹೇಳಿಕೆ ನೀಡಿದ್ದು, ತಮ್ಮ ಮಗ ಅಜಯ್ ಕುಮಾರ್‌ಗೆ ಸುಮಾರು ಒಂದೂವರೆ ವರ್ಷಗಳ ಹಿಂದೆ ವಿವಾಹವಾಗಿತ್ತು. ಅಜಯ್ ಮಾದಕ ವ್ಯಸನಿಯಾಗಿದ್ದಾನೆ ಎಂದು ತಿಳಿಸಿದರು.

ಮಂಗಳವಾರ ರಾತ್ರಿ ಮಗುವಿನ ತಂದೆ ಅಜಯ್ ಕುಡಿದು ಮನೆಗೆ ಬಂದಿದ್ದು, ಬೆಳಗಿನ ಜಾವ ಮೂರರ ಸುಮಾರಿಗೆ ಮಗನ ಕೋಣೆಯಿಂದ ಜೋರಾದ ಶಬ್ಧ ಕೇಳಿ ಬಂತು. ತಕ್ಷಣವೇ ನಾವು ಅಲ್ಲಿಗೆ ಹೋದೆವು. ಈ ವೇಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗುವನ್ನು ನಭಾದಲ್ಲಿರುವ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಗುವನ್ನುಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರು.

ಇನ್ನು ಘಟನೆ ನಡೆದ ತಕ್ಷಣವೇ ಮಗುವಿನ ಪೋಷಕರು ಮನೆಯ ಹಿಂಬದಿಯಿಂದ ಪರಾರಿಯಾಗಿದ್ದಾರೆ. ಇನ್ನೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!