9ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ
ಹೊಸದಿಲ್ಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಪ್ರತಿ ಲೀಟರ್ ಗೆ ತಲಾ 80 ಪೈಸೆಗಳಷ್ಟು ಏರಿಕೆಯಾಗಿದ್ದು, ಕಳೆದ ಒಂಬತ್ತು ದಿನಗಳಲ್ಲಿ ಲೀಟರ್‌ಗೆ 5.60 ರೂ ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರವು ಈ ಹಿಂದೆ 100.21 ರೂ ದಿಂದ 101.01 ರೂ. ಗೆ ಏರಿಕೆಯಾಗಿದ್ದರೆ, ಡೀಸೆಲ್ ದರಗಳು ಲೀಟರ್ ಗೆ 91.47 ರೂ ದಿಂದ 92.27 ರೂ. ಗೆ ಏರಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆಯಲ್ಲಿ 84 ಪೈಸೆ ಏರಿಕೆಯಾಗಿದ್ದರೆ, ಡೀಸಲ್ ಬೆಲೆಯಲ್ಲಿ 79 ಪೈಸೆ ಏರಿಕೆಯಾಗಿದೆ. ರಾಜ್ಯ ರಾಜಧಾನಿಯಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 106.46 ರೂ ಮತ್ತು 90.49 ರೂ ಇದೆ.
ಮುಂಬೈನಲ್ಲಿ 84 ಪೈಸೆ ಮತ್ತು 85 ಪೈಸೆ ಏರಿಕೆಯಾದ ನಂತರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 115.88 ರೂ. ಮತ್ತು 100.10 ರೂ. ತಲುಪಿದೆ





