ಕೆಲಸ ಸಿಕ್ಕಿಲ್ಲವೆಂದು ನೋಂದು ಯುವಕ ನೇಣು ಬಿಗಿದು ಆತ್ಮಹತ್ಯೆ
ಸಾಗರ: ಮನೆಯಲ್ಲಿ ಸಹೋದರರೆಲ್ಲ ಉತ್ತಮವಾದ ಉದ್ಯೋಗದಲ್ಲಿರುವಾಗ ತನಗೆ ಮಾತ್ರ ಕೆಲಸ ಸಿಕ್ಕಿಲ್ಲ ಎಂಬ ಮಾನಸಿಕ ವ್ಯಥೆಗೀಡಾಗಿದ್ದ ಯುವಕ ನೇಣಿಗೆ ಶರಣಾದ ಘಟನೆ ತಾಲೂಕಿನ ಮಾಸೂರು ಸಮೀಪದ ಮೆಳವರಿಗೆಯಲ್ಲಿ ಸೋಮವಾರ ಸಂಜೆ ನಡೆದಿದೆ.
ಮೆಳವರಿಗೆಯ ರಾಮಪ್ಪನವರ ಪುತ್ರ ರವಿ(30) ಮೃತ ಯುವಕ. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿ ಹಾಕಿಕೊಂಡು ಜೀವ ಕಳೆದುಕೊಂಡಿದ್ದಾರೆ.
ಪದವಿ ಮುಗಿಸಿಕೊಂಡಿದ್ದ ರವಿಗೆ ಸರಿಯಾದ ಉದ್ಯೋಗ ಸಿಗದೆ ಇದ್ದುದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಸಾವಿಗೂ ಮುನ್ನ ರವಿ ಡೆತ್ ನೋಟ್ ಬರೆದಿಟ್ಟಿದ್ದಾನೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





