ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯೆ ಕೆರೆಗೆ ಹಾರಿ ಆತ್ಮಹತ್ಯೆ
ಸಾಗರ: ಇಲ್ಲಿನ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಬಾಲ ಸ್ವಾಸ್ಥ್ಯ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯೆಯೊಬ್ಬರು ಗಣಪತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಡಾ. ಶರ್ಮದಾ (36) ಮೃತ ವೈದ್ಯೆ. ಸೋಮವಾರ ರಾತ್ರಿ ಮನೆಯಿಂದ ತಮ್ಮ ಸ್ಕೂಟಿಯಲ್ಲಿ ಗಣಪತಿ ಕೆರೆ ಹತ್ತಿರ ಬಂದು ಬೈಕನ್ನು ಒಂದು ಬದಿ ನಿಲ್ಲಿಸಿ, ಚಪ್ಪಲಿಯನ್ನು ದಂಡೆಯ ಮೇಲೆ ಬಿಚ್ಚಿಟ್ಟು ನೀರಿಗೆ ಹಾರಿದ್ದಾರೆ.
ರಸ್ತೆಯಲ್ಲಿ ಹೋಗುತ್ತಿದ್ದವರು ಶರ್ಮದಾ ನೀರಿಗೆ ಬಿದ್ದಿದ್ದನ್ನು ಗಮನಿಸಿ ಮೇಲಕ್ಕೆತ್ತಿದ್ದಾರೆ. ಈ ವೇಳೇ ಆಕೆ ಉಸಿರಾಡುತ್ತಿದ್ದರು. ತಕ್ಷಣ ಕಾರಿನಲ್ಲಿ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶರ್ಮದಾ ಮೃತಪಟ್ಟಿದ್ದಾರೆ.





