ಶಿವಮೊಗ್ಗ: ಸಾಗರ ತಾಲೂಕು ವೈದ್ಯಾಧಿಕಾರಿ ಕೆರೆಯಲ್ಲಿ ಶವವಾಗಿ ಪತ್ತೆ
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ವೈದ್ಯಾಧಿಕಾರಿ (ಟಿಹೆಚ್ಓ) ಡಾ.ಶರ್ಮಾ ಅವರ ಮೃತದೇಹವು, ಅನುಮಾನಾಸ್ಪದವಾಗಿ ಕೆರೆಯಲ್ಲಿ ಪತ್ತೆಯಾಗಿದೆ. ಅವರ ಸಾವಿನ ಬಗ್ಗೆ ಹಲವು ಅನುಮಾನಗಳಿಗೂ ಕಾರಣವಾಗಿದೆ.
ಕೊರೊನಾ ಕಾಲದಲ್ಲಿ ರಾಷ್ಟ್ರೀಯ ಲಸಿಕಾ ಅಭಿಯಾನದಂತ ಸಂದರ್ಭದಲ್ಲಿ ಡಾ.ಶರ್ಮಾ ಉತ್ತಮ ರೀತಿಯಲ್ಲಿ ಕೆಲಸ ಮಾಡಿ, ಒಳ್ಳೆಯ ಹೆಸರು ಪಡೆದಿದ್ದರು. ಇವರ ಪತಿ ಸಾಗರ ತಾಲೂಕಿನ ಭೀಮನಕೋಣೆ ಗ್ರಾಮ ಪಂಚಾಯ್ತಿಯ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ಅವರು ನಗರದ ಗಣಪತಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದು ಕೊಲೆಡಯೋ, ಆತ್ಮಹತ್ಯೆಯೋ ಎನ್ನುವ ಅನುಮಾನ ಶುರುವಾಗಿದೆ.





