25 ವರ್ಷದ ಯುವತಿಯನ್ನು ಮದುವೆಯಾಗಿ ವೈರಲ್ ಆಗಿದ್ದ ಶಂಕರಣ್ಣ ಆತ್ಮಹತ್ಯೆ
ಕುಣಿಗಲ್: ತನಗಿಂತ 20 ವರ್ಷ ಕಿರಿಯ ವಯಸ್ಸಿನ ಯುವತಿಯನ್ನು ಮದುವೆಯಾಗಿ ಸುದ್ದಿಯಲ್ಲಿದ್ದ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮ ಸಮೀಪದ ಅಕ್ಕಿಮರಿಪಾಳ್ಯದ ಶಂಕರಪ್ಪ(45) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಹೊಲವೊಂದರಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2021ರ ಅಕ್ಟೋಬರ್ನಲ್ಲಿ ಸಂತೆಮಾವತ್ತೂರು ಗ್ರಾಮದ ಮೇಘನಾ ಮತ್ತು ಅಕ್ಕಿಮರಿಪಾಳ್ಯದ ಶಂಕರಪ್ಪ ಅವರ ಮದುವೆ ನಡೆದಿದ್ದು, ಅವರಿಬ್ಬರು ಸಂತೋಷದಿಂದ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.
ಇನ್ನು 45 ವರ್ಷ ವಯಸ್ಸಾದರೂ ಶಂಕರಪ್ಪಗೆ ಮದುವೆ ಆಗದ ಹಿನ್ನಲೆಯಲ್ಲಿ ಮೇಘನಾ ಅವರೇ ಹೋಗಿ ತನ್ನನ್ನು ಮದುವೆ ಆಗುವಂತೆ ಪ್ರಸ್ತಾಪ ಇಟ್ಟಿದ್ದರು.
ಇದಕ್ಕೆ ಒಪ್ಪಿದ್ದ ಶಂಕರಣ್ಣ ಗ್ರಾಮ ಸಮೀಪದ ದೇವಾಲಯದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.





