ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲು
ಬ್ರೆಸಿಲಿಯಾ: ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅಸ್ವಸ್ಥಗೊಂಡಿದ್ದು, ಅವರನ್ನು ಬ್ರೆಸಿಲಿಯಾದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
2018ರಲ್ಲಿ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಬೋಲ್ಸನಾರೊ ಅವರ ಹೊಟ್ಟೆಗೆ ಇರಿಯಲಾಗಿತ್ತು. ಆ ಬಳಿಕ ಅವರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭವಾಗಿದ್ದವು.
ಅನಾರೋಗ್ಯದ ಕಾರಣ ಬೋಲ್ಸನಾರೊ ಅವರು ರಿಪಬ್ಲಿಕನ್ ಪಕ್ಷ ಸೋಮವಾರ ಆಯೋಜಿಸಿರುವ ಸಭೆಯಲ್ಲಿ ಭಾಗವಹಿಸಿಲ್ಲ.
ಈ ಮಧ್ಯೆ, ‘ಅಧ್ಯಕ್ಷರು ಚೆನ್ನಾಗಿದ್ದಾರೆ. ಕೆಲವೊಂದು ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿರುವ ಕಾರಣ ಅವರು ಸಭೆಗೆ ಬಂದಿಲ್ಲ’ ಎಂದು ಪಕ್ಷದ ಅಧ್ಯಕ್ಷ ಮಾರ್ಕೋಸ್ ಪಿರೇರಾ ತಿಳಿಸಿದ್ದಾರೆ.





