ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ದಾಳಿಯನ್ನು ಖಂಡಿಸಿ PFI ವತಿಯಿಂದ ಮಡಂತ್ಯಾರಲ್ಲಿ ಪ್ರತಿಭಟನೆ

ಮಡಂತ್ಯಾರ: ಅ 29 ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ಮತ್ತು ಸಂಘಪರಿವಾರದ ಗೂಂಡಗಳಿಂದ ನಡೆಯುವ ದಾಳಿಯನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಡಂತ್ಯಾರ್ ಡಿವಿಝನ್ ವತಿಯಿಂದ ಮಡಂತ್ಯಾರ್ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಇದರ ಕಾರ್ಯಕರ್ತರಾದ ನವಾಝ್ ಶರೀಫ್ ಕಟ್ಟೆ ದಿಕ್ಸೂಚಿ ಭಾಷಣವನ್ನು ಮಾಡಿದರು. ಈ ಸಮಯದಲ್ಲಿ ತ್ರಿಪುರ ಸರ್ಕಾರ ಮತ್ತು ಸಂಘಪರಿವಾರದ ವಿರುದ್ದ ಗಟ್ಟಿ ಧ್ವನಿಯಲ್ಲಿ ಘೋಷಣೆ ಕೂಗಲಾಯಿತು.
ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಡಂತ್ಯಾರ್ ಡಿವಿಝನ್ ಅಧ್ಯಕ್ಷರಾದ ಬಿ.ಎಮ್.ಅಬ್ದುಲ್ ರಝಾಕ್, ಎಸ್ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ನಿಸಾರ್ ಕುದ್ರಡ್ಕ, ಮಡಂತ್ಯಾರ್ ಗ್ರಾಮ ಪಂಚಾಯತ್ ಸದಸ್ಯರಾದ ಹನೀಫ್ ಪುಂಜಾಲಕಟ್ಟೆ ಮತ್ತು ಅನೇಕ ಕಾರ್ಯಕರ್ತರು, ಊರಿನ ನಾಗರಿಕರು ಉಪಸ್ಥಿತರಿದ್ದರು.

