December 16, 2025

ವಿಟ್ಲ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ಪ್ರತಿಭಟನೆ

0
IMG-20211029-WA0018.jpg

ವಿಟ್ಲ: ತ್ರಿಪುರದ ಮುಸ್ಲಿಂ ಸಮುದಾಯ ಹಾಗೂ ಧಾರ್ಮಿಕ ಕೇಂದ್ರಗಳ ಮೇಲೆ ನಡೆಯುವ ಸಂಘಪರಿವಾರದ ಅಟ್ಟಹಾಸದ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿಟ್ಲ ಡಿವಿಷನ್ ವತಿಯಿಂದ ವಿಟ್ಲದ ಮೇಗಿನಪೇಟೆಯಲ್ಲಿ ಪ್ರತಿಭಟನೆ ನಡೆಯಿತು.

ಈ ಪ್ರತಿಭಟನೆಯು PFI ವಿಟ್ಲ ಡಿವಿಷನ್ ಕಾರ್ಯದರ್ಶಿ ನಝಿರ್ ಪುಣಚ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರತಿಭಟನೆ ಉದ್ದೇಶಿಸಿ PFI ವಿಟ್ಲ ಜಿಲ್ಲಾ ಸಮಿತಿ ಸದಸ್ಯರಾದ ರಹಿಮಾನ್ ಮಠ ತ್ರಿಪುರ ಘಟನೆ ಮತ್ತು ಸಂಘಪರಿವಾರದ ಹೇಯ ಕೃತ್ಯಗಳನ್ನು ಖಂಡಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ PFI ಮುಖಂಡರಾದ ಅಝೀಝ್ ಕಡಂಬು, ಶಾಫಿ ಮಳಿಗೆ, ರಿಯಾಝ್ ಕಂಬಳಬೆಟ್ಟು ಉಪಸ್ಥಿತರಿದ್ದರು.
ಅನ್ವರ್ ಪೆರುವಾಯಿ ಸ್ವಾಗತಿಸಿ, ರಹೀಮ್ ಕಂಬಳಬೆಟ್ಟು ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!