ಪುಶ್ ಬ್ಯಾಕ್ ಸಮಯದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಸ್ಪೈಸ್ ಜೆಟ್ ವಿಮಾನ
ನವದೆಹಲಿ: ಸೋಮವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ವಿಮಾನವು ಪುಶ್ ಬ್ಯಾಕ್ ಸಮಯದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ವಿಮಾನವು ಪ್ರಯಾಣಿಕರ ಟರ್ಮಿನಲ್‌ನಿಂದ ರನ್ ವೇಗೆ ಚಲಿಸುವಾಗ ಪುಶ್ ಬ್ಯಾಕ್ ಸಮಯದಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರಿಗಾಗಿ ವಿಮಾನವನ್ನು ಬದಲಾಯಿಸಲಾಯಿತು.
ಇನ್ನು ಈ ಘಟನೆಯ ಬಗ್ಗೆ ಸ್ಪೈಸ್ ಜೆಟ್ ವಕ್ತಾರರು ಮಾಹಿತಿ ನೀಡಿದ್ದು, ಸ್ಪೈಸ್ ಜೆಟ್ ವಿಮಾನ ಎಸ್ ಜಿ 160 ದೆಹಲಿ ಮತ್ತು ಜಮ್ಮು ನಡುವೆ ಕಾರ್ಯನಿರ್ವಹಿಸಬೇಕಿದ್ದು, ಹಿಂದಕ್ಕೆ ತಳ್ಳುವ ಸಮಯದಲ್ಲಿ, ಬಲ-ರೆಕ್ಕೆಯ ಹಿಂಭಾಗದ ಅಂಚು ಕಂಬದೊಂದಿಗೆ ಡಿಕ್ಕಿ ಹೊಡೆದಿದೆ. ವಿಮಾನವನ್ನು ಸರಿ ಪಡಿಸೋ ಕಾರಣದಿಂದಾಗಿ ಪ್ರಯಾಣಿಕರಿಗಾಗಿ ಬದಲಿ ವಿಮಾನವನ್ನು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.





