August 21, 2026

ವಿಟ್ಲ: ಉಲಾಯಿ-ಪಿದಾಯಿ ಜುಗಾರಿ ಅಡ್ಡೆಗೆ ವಿಟ್ಲ ಪೊಲೀಸ್ ದಾಳಿ: ಐದು ಮಂದಿ ಆರೋಪಿಗಳು ವಶಕ್ಕೆ

0
image_editor_output_image1750033889-1648473151208

ವಿಟ್ಲ: ಅಕ್ರಮವಾಗಿ ಜುಗಾರಿ ಆಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ವಿಟ್ಲ ಪೊಲೀಸರು ಐದು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ಕೇಪು ಗ್ರಾಮದ ಕುದ್ದುಪದವು ಏರಟೆಲ್ ಟವರ್‌ ಬಳಿ ನಡೆದಿದೆ.

ಕೇಪು ಗ್ರಾಮದ ಕುದ್ದುಪದವು ಎಂಬಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಇಸ್ಪಿಟ್‌ ಎಲೆಗಳಿಂದ ಉಲಾಯಿ-ಪಿದಾಯಿ ಜುಗಾರಿ ಅಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ಆರೋಪಿಗಳಾದ ಕೆ ಪಿ ಹನೀಫ್‌, ಅಬೂಬಕ್ಕರ್‌ ಸಿದ್ದೀಕ್‌, ಸಿರಾಜುದ್ದೀನ್‌, ಮುನೀರ್‌ ಕೆ. ಎಂ, ಮಹಮ್ಮದ್‌ ಇಬ್ರಾಹಿಂ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದು, ಜುಗಾರಿ ಆಟಕ್ಕೆ ಉಪಯೋಗಿಸಿದ ಒಟ್ಟು ಹಣ 5150/-ರೂ ಹಾಗೂ ಆಟಕ್ಕೆ ಬಳಸಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!