March 22, 2026

ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಮಗಳ ಮೃತದೇಹವನ್ನು 10 ಕಿ.ಮೀ‌.ವರೆಗೂ ಹೆಗಲ ಮೇಲೆ ಹೊತ್ತುಕೊಂಡೇ ಹೋದ ತಂದೆ

0
image_editor_output_image1195563368-1648284640071.jpg

ಚತ್ತೀಸಗಡ: ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ತನ್ನ ಮಗಳ ಮೃತದೇಹವನ್ನು ತಂದೆಯೊಬ್ಬ ಸುಮಾರು 10 ಕಿಮೀ ವರೆಗೂ ಹೆಗಲ ಮೇಲೆ ಹೊತ್ತುಕೊಂಡೇ ಹೋಗಿರುವ ಘಟನೆ ವರದಿಯಾಗಿದೆ.

ಚತ್ತೀಸಗಡದ ಸರಗುಜಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅಂಬದಾಲಾ ಹಳ್ಳಿಯ ಈಶ್ವರ್ ದಾಸ್ ಎನ್ನುವ ವ್ಯಕ್ತಿ ಜ್ವರದಿಂದ ಬಳಲುತ್ತಿದ್ದ ತನ್ನ 7 ವರ್ಷದ ಮಗಳು ಸುರೇಖಾಳನ್ನು ಸರಗುಜಾ ಜಿಲ್ಲೆಯ ಲಖನ್‌ಪುರ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿದ್ದರು.

ಆದರೆ, ಚಿಕಿತ್ಸೆ ಫಲಿಸದೇ ಸುರೇಖಾ ಕಳೆದ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದರು. ಶವ ಸಾಗಿಸುವ ವಾಹನ ಬರದಿದ್ದರಿಂದ ಈಶ್ವರ್ ದಾಸ್ ಮಗಳ ಶವವನ್ನು ಹೊತ್ತುಕೊಂಡೇ ಮನೆಗೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ್ದರು.

ಈಶ್ವರ್ ದಾಸ್ ಮಗಳ ಶವವನ್ನು ಹೊತ್ತುಕೊಂಡೇ ಸಾಗಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಈ ಘಟನೆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಚತ್ತೀಸ್‌ಗಡದ ಆರೋಗ್ಯ ಸಚಿವ ಟಿಎಸ್ ಸಿಂಗ್ ಡಿಯೋ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!