March 22, 2026

ಹೈಡ್ರೋಕ್ಲೋರೈಡ್, ಪ್ಯಾರೆಸಿಟಮಾಲ್ ಸೇರಿದಂತೆ 800 ಔಷಧಿಗಳ ದರಗಳಲ್ಲಿ ಹೆಚ್ಚಳ

0
image_editor_output_image1867612636-1648282743010.jpg

ನವದೆಹಲಿ: ಭಾರತದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು (ಎನ್‌ಪಿಪಿಎ) ಶುಕ್ರವಾರ ರಾಷ್ಟ್ರೀಯ ಅಗತ್ಯ ಔಷಧಿಗಳ (ಎನ್‌ಎಲ್‌ಇಎಂ) ಸಗಟು ಬೆಲೆ ಸೂಚ್ಯಂಕದಲ್ಲಿ (ಡಬ್ಲ್ಯುಪಿಐ) 10.7% ರಷ್ಟು ಬೆಲೆ ಏರಿಕೆಯನ್ನು ಘೋಷಿಸಿರುವುದರಿಂದ ಗ್ರಾಹಕರು ಕೆಲವು ಅಗತ್ಯ ಔಷಧಿಗಳಿಗೆ ಇನ್ಮುಂದೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.

ಜ್ವರ, ಸೋಂಕುಗಳು, ಹೃದ್ರೋಗ, ಅಧಿಕ ರಕ್ತದೊತ್ತಡ, ಚರ್ಮ ರೋಗಗಳು ರಕ್ತಹೀನತೆ ಮತ್ತು ಹೃದಯ ಕಾಯಿಲೆ ಸೇರಿದಂತೆ ಹೆಚ್ಚಿನ ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಸುಮಾರು 800 ನಿಗದಿತ ಔಷಧಿಗಳ ದರಗಳು ಏಪ್ರಿಲ್ 1 ರಿಂದ 10.7 ರಷ್ಟು ಏರಿಕೆಯಾಗಲಿವೆ.

ಪ್ಯಾರೆಸಿಟಮಾಲ್, ಫೆನೋಬಾರ್ಬಿಟೋನ್, ಫೆನಿಟೋಯಿನ್ ಸೋಡಿಯಂ, ಅಜಿಥ್ರೊಮೈಸಿನ್, ಸಿಪ್ರೊಫ್ಲೋಕ್ಸಾಸಿನ್ ಹೈಡ್ರೋಕ್ಲೋರೈಡ್ ಮತ್ತು ಮೆಟ್ರೋನಿಡಜೋಲ್ ನಂತಹ ಔಷಧಿಗಳ ಬೆಲೆ ಹೆಚ್ಚಾಗಲಿದೆ.

ಔಷಧಗಳ (ಬೆಲೆ ನಿಯಂತ್ರಣ) ಆದೇಶ, 2013 ರ ನಿಬಂಧನೆಗಳ ಪ್ರಕಾರ ಮುಂದಿನ ಕ್ರಮಕ್ಕಾಗಿ ಇದನ್ನು ಸಂಬಂಧಪಟ್ಟ ಎಲ್ಲರ ಗಮನಕ್ಕೆ ತರಲಾಗಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!