March 21, 2026

ಹಿಜಾಬ್‌ ಕುರಿತ ಹೈಕೋರ್ಟ್‌ ತೀರ್ಪು ದುರುಪಯೋಗ: ಮಂಗಳೂರಿನಲ್ಲಿ ರಸ್ತೆಗಿಳಿದ ವಿದ್ಯಾರ್ಥಿ ಸಮೂಹ

0
image_editor_output_image1685687733-1648271332681.png

ಮಂಗಳೂರು: ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿದ ತೀರ್ಪನ್ನು ಪಾಲಿಸುವಂತೆ ಮಂಗಳೂರು ವಿಶ್ವವಿದ್ಯಾನಿಲಯ ತನ್ನ ಸಂಯೋಜಿತ ಕಾಲೇಜುಗಳಿಗೆ ಹೊರಡಿಸಿದ್ದ ಸುತ್ತೋಲೆ ವಿರುದ್ಧ ಮಂಗಳೂರು ವಿ.ವಿ ವಿದ್ಯಾರ್ಥಿ ಸಮನ್ವಯ ಸಮಿತಿಯಿಂದ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಲಾಯಿತು.

ಸ್ಥಳದಲ್ಲಿ ಜಮಾಯಿಸಿದ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ರಸ್ತೆಯಲ್ಲಿ ಧರಣಿ‌ ಕುಳಿತು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಪ್ರತಿಭಟನಾ ಸ್ಥಳದ ಹತ್ತಿರ ಭಾರಿ ಸಂಖ್ಯೆಯ ಸಾರ್ವಜನಿಕರು ಜಮಾಯಿಸಿದ್ದು,

ಈ ಹಿನ್ನಲೆ ಪೊಲೀಸರು ಹೆಚ್ಚಿನ ಭದ್ರತೆ ಕೈಗೊಂಡಿದ್ರು. ಜೊತೆಗೆ ಇದೇ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಂತ ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಿಡಿದು ಪ್ರತಿಭಟಿಸಿದ್ರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿ ನಾಯಕಿಯರಾದ ಹಿಬಾ ಶೇಖ್, ಗೌಸಿಯಾ, ಆಯತ್ ಪ್ರತಿಭಟನೆಯಲ್ಲಿ ಹೈಕೋರ್ಟ್ ಆದೇಶ ಹಾಗೂ ವಿಶ್ವ ವಿದ್ಯಾಲಯದ ಸುತ್ತೋಲೆ ವಿರುದ್ಧ ಖಾರವಾಗಿ ಮಾತನಾಡಿದ್ರು.

ಈ ಸಂದರ್ಭ ವಿದ್ಯಾರ್ಥಿ ಸಮನ್ವಯ ಸಮಿತಿಯ ಅಧ್ಯಕ್ಷ ರಿಯಾಝ್‍ ಅಂಕತ್ತಡ್ಕ, ಸಂಚಾಲಕ ಅಶಾಮ್‍, ಮಾಧ್ಯಮ ವಕ್ತಾರ ಜಾಬೀರ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!