August 21, 2026

ಕುಕ್ಕೆ ಸುಬ್ರಹ್ಮಣ್ಯ ಕ್ಕೂ ಹಬ್ಬಿದ ಗೋ ಕಳ್ಳರ ಹಾವಳಿ: ಘಟನೆಯ ದೃಶ್ಯ ಸಿ ಸಿ ಕ್ಯಾಮರಾದಲ್ಲಿ ಸೆರೆ

0
IMG-20220325-WA0024.jpg

ಸುಬ್ರಹ್ಮಣ್ಯ: ರಾಜ್ಯದಲ್ಲಿ ಗೊ ಹತ್ಯೆ ನಿಷೇದ ಕಾನೂನು ಜಾರಿಯಲ್ಲಿದ್ದರೂ ಗೊ ಕಳ್ಳರ ಹಾವಳಿ ಮಾತ್ರ ನಿಲ್ಲುತ್ತಿಲ್ಲ. ರಾಜ್ಯದ ಪ್ರಸಿದ್ದ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವಠಾರದ ದೇವಾಲಯದ ಪಾರ್ಕಿಂಗ್ ಜಾಗದಿಂದ ಆಂಜನೇಯ ಗುಡಿಯ ಹಿಂಬಾಗದಿಂದ ಮಲಗಿದ್ದ ದನವನ್ನು ಕಳ್ಳರು ಕದ್ದು ಇನ್ನೋವ ಕಾರಿನಲ್ಲಿ ತುಂಬಿಸಿ ಕದ್ದೊಯ್ಯಲು ಯತ್ನಿಸಿ ದ ಘಟನೆ ಮಾ 24 ರಾತ್ರಿ ನಡೆದಿದ್ದು, ಘಟನೆಯ ದೃಶ್ಯ 25 ರಂದು ಸಿ ಸಿ ಕ್ಯಾಮರಾ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಇದೀಗ ಸಿ ಸಿ ಕ್ಯಾಮರ ದೃಶ್ಯಾವಳಿ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ. ದ್ರಶ್ಯದಲ್ಲಿ ಕಳ್ಳರ ಕೈಯಿಂದ ಗೋವುಗಳು ತಪ್ಪಿಸಿಕೊಂಡು, ಪ್ರಾಣ ಉಳಿಸಿಕೊಂಡಿದೆ.
ಗ್ರಾಮಸ್ಥರು ಗೋ ಕಳ್ಳರ ಹಾವಳಿಯಿಂದ ಬೇಸತ್ತು ಹಿಡಿ ಶಾಪ ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!