August 21, 2026

ಸುಳ್ಯ: ಬೈಕ್ ಮತ್ತು ರಿಕ್ಷಾಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲೆತ್ನಿಸಿದ ಕಾರು ಚಾಲಕನನ್ನು ಸೆರೆ ಹಿಡಿದ ಪೊಲೀಸರು

0
IMG-20220325-WA0021.jpg

ಸುಳ್ಯ: ತಾಲೂಕಿನ ಪಾಲಡ್ಕದಲ್ಲಿ ರಸ್ತೆ ಬದಿ ನಿಂತಿದ್ದ ಬೈಕ್ ಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿ ಅದೇ ರಸ್ತೆಯ ಬಳಿ ಇದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದು ರಿಕ್ಷಾ ಪಲ್ಟಿಯಾಗಿಸಿ ಅಲ್ಲಿಯೂ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ ಕಾರು ಚಾಲಕನನ್ನು ಕಾರು ಸಮೇತ ಸೆರೆ ಹಿಡಿದ ಘಟನೆ ಮಾ.25 ರ ಸಂಜೆ ವರದಿಯಾಗಿದೆ.

ಪೊಲೀಸರು ಆರೋಪಿಯನ್ನು ಸೆರೆ ಹಿಡಿದು ವಿಚಾರಣೆ ನಡೆಸಿ, ಕಾರು ಚಾಲಕ ಪೆರಾಜೆ ಮೂಲದ ಸುಕುಮಾರ ಗರುಗುಂಜ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಬೈಕ್ ಸವಾರ ಪಾಲಡ್ಕದ ಸಚಿನ್ ಸಣ್ಣ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾದರೆ, ಕೂಲಿಯಾಳುಗಳನ್ನು ಸುಳ್ಯಕ್ಕೆ ಕರೆದೊಯ್ಯುತ್ತಿದ್ದ ರಿಕ್ಷಾ ನಜ್ಜುಗುಜ್ಜಾಗಿದೆ.

ರಿಕ್ಷಾದಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕ ಆಲೆಟ್ಟಿ ಕಡೆ ಪರಾರಿಯಾಗಲೆತ್ನಿಸಿದಾಗ ಪೋಲಿಸರು ಕಾರು ಅಡ್ಡಗಟ್ಟಿ ಆರೋಪಿಯನ್ನು ಕಾರು ಸಮೇತ ಸೆರೆ ಹಿಡಿದು ಠಾಣೆಗೆ ಕರೆದೊಯ್ದಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!