May 17, 2026

ಗಾಣದ ಕಬ್ಬು ನುರಿಯುವ ಯಂತ್ರಕ್ಕೆ ಸಿಲುಕಿ ವ್ಯಕ್ತಿಯ ರುಂಡ ಬೇರ್ಪಟ್ಟು ಮೃತ್ಯು

0
image_editor_output_image133521035-1648207055182.jpg

ವಿಜಯನಗರ: ಗಾಣದ ಕಬ್ಬು ನುರಿಯುವ ಯಂತ್ರಕ್ಕೆ ಸಿಲುಕಿ ವ್ಯಕ್ತಿಯ ರುಂಡ ಬೇರ್ಪಟ್ಟ ಘಟನೆ ತಾಲ್ಲೂಕಿನ ನಾಗೇನಹಳ್ಳಿ ಸಮೀಪ ಶುಕ್ರವಾರ ನಡೆದಿದೆ.

ಉತ್ತರ ಪ್ರದೇಶದ ಸುಶೀಲ್‌ (40) ಮೃತ ವ್ಯಕ್ತಿ. ‘ನಾಗೇನಹಳ್ಳಿ ಸಮೀಪದ ಕಬ್ಬಿನ ಗಾಣದ ಮನೆಯಲ್ಲಿ ಕಬ್ಬು ನುರಿಯುವ ಯಂತ್ರಕ್ಕೆ ಸುಶೀಲ್‌ ಗ್ರೀಸ್‌ ಹಚ್ಚುತ್ತಿದ್ದ ವೇಳೆ ಅದರೊಳಗೆ ಸಿಲುಕಿಕೊಂಡಿದ್ದಾನೆ. ಯಂತ್ರ ವೇಗವಾಗಿ ತಿರುಗುತ್ತಿದ್ದರಿಂದ ರುಂಡ ಬೇರ್ಪಟ್ಟಿದೆ. ರುಂಡ ಒಂದು ಕಡೆ, ದೇಹ ಒಂದು ಕಡೆ ಬಿದ್ದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿದು ಗ್ರಾಮಸ್ಥರು ಸ್ಥಳದಲ್ಲಿ ಸೇರಿದ್ದರು. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *

error: Content is protected !!