August 21, 2026

ಸುಳ್ಯ ತಾಲೋಕು ವಕೀಲರ ಸಂಘದ ಚುನಾವಣೆ: ಜಿದ್ದಾಜಿದ್ದಿನ ಹೋರಾಟದಲ್ಲಿ ಅಧ್ಯಕ್ಷರಾಗಿ ವಕೀಲ ನಾರಾಯಣ ಪಾಟಾಳಿ ಕೆ. ಆಯ್ಕೆ

0
image_editor_output_image613977512-1648210377418.jpg

ಸುಳ್ಯ: ತಾಲೋಕು ವಕೀಲರ ಸಂಘದ ಚುನಾವಣೆ ಮಾ.25 ರಂದು ವಕೀಲ ಸಂಘದ ಸಭಾಭವನದಲ್ಲಿ ನಡೆಯಿತು. ಅದ್ಯಕ್ಷತೆಗೆ ನಾರಾಯಣ ಕೆ ಮತ್ತು ಶ್ರೀ ಹರಿ ಕುಕ್ಕುಡೇಲು ನಡುವೆ ಸ್ಪರ್ದೆ ಏರ್ಪಟ್ಟು ನೇರ ಹಣಾಹಣಿಯಲ್ಲಿ ಅಂತಿಮವಾಗಿ ನಾರಾಯಣ ಪಾಟಾಳಿ ಕೆ 1 ಮತದ ಅಂತರದಿಂದ ವಿಜೇತರಾಗಿ ಆಯ್ಕೆಯಾದರು ನಾರಾಯಣರು 50 ಮತ ಪಡೆದರೆ ಶ್ರೀಹರಿ ೪೯ಮತ ಪಡೆದು ಅಂತಿಮ ವಾಗಿ ಕೇವಲ 1 ಮತದಿಂದ ಪರಾಭವ ಗೊಂಡರು.

ಕಾರ್ಯದರ್ಶಿ ಹುದ್ದೆಗೆ ಸ್ಪರ್ದೆ ಏರ್ಪಡದೆ ವಿನಯ್ ಕುಮಾರ್ ಮುಳುಗಾಡು ಅವಿರೋಧವಾಗಿ ಆಯ್ಕೆಯಾದರೆ ಉಪಾಧ್ಯಕ್ಷತೆಗೆ ದೀಪಕ್ ಕುತ್ತಮೊಟ್ಟೆ ಅವಿರೋಧವಾಗಿ ಆಯ್ಕೆಯಾದರು.

ಕೋಶಾದೀಕಾರಿ ಹುದ್ದೆಗೆ ಸ್ಪರ್ದೆಗೆ ಜಗದೀಶ್ ಡಿ.ಎ ಮತ್ತು ಲೋಲಜಾಕ್ಷಿ ನಡುವೆ ನಡೆದ ಸ್ಪರ್ಧೆಯಲ್ಲಿ ಜಗದೀಶ ೫೪ ಮತ ಪಡೆದು ಆಯ್ಕೆಯಾದರು. ಲೋಲಜಾಕ್ಷಿ 48 ಮತ ಪಡೆದು ಪರಾಜಯ ಹೊಂದಿದರು‌.
ಜೊತೆ ಕಾರ್ಯದರ್ಶಿಗೆ ಪಲ್ಲವಿ ಅವಿರೋದವಾಗಿ ಆಯ್ಕೆಯಾದರು, ಸಾಂಸ್ಕೃತಿಕ ಕಾರ್ಯರ್ಶಿಗೆ ಅಬೂಬಕ್ಕರ್ ಅಡ್ಕಾರ್ ಅವಿರೋಧ ಆಯ್ಕೆಯಾದರು.
ಕ್ರೀಡಾ ಕಾರ್ಯ ದರ್ಶಿಗೆ ಸತೀಶ್ ಕೆ ಅವಿರೋಧಾಯ್ಕೆ ನಡೆಯಿತು.

ಗ್ರಂಥಾಲಯ ಕಾರ್ಯದರ್ಶಿ ಹುದ್ದೆಗೆ ವಕೀಲರಾದ ಹರ್ಷಿತ್ ಮತ್ತು ಧರ್ಮಪಾಲ ಕೊಯಿಂಗಾಜೆ ನಡುವೆ ಸ್ಪರ್ಧೆ ನಡೆದು 55 ಮತದಿಂದ ಹರ್ಷಿತ್ ಕಾರ್ಜ ಆಯ್ಕೆಯಾದರು ಧರ್ಮಪಾಲ ೪೮ ಮತ ಪಡೆದು ಪರಾಜಿತರಾದರು. ಚುನವಣಾಧಿಕಾರಿಯಾಗಿ ಹಿರಿಯ ವಕೀಲರಾದ ದಳ ಸುಭ್ರಾಯ ಭಟ್ ಮತ್ತು ಜಗದೀಶ್ ಹುದೇರಿ ಕಾರ್ಯ ನಿರ್ವಹಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!