ಚಲಿಸುತ್ತಿದ್ದ ಬಸ್ಸಿನಲ್ಲೇ ಮದ್ಯಪಾನ ಮಾಡಿದ ಹೈಸ್ಕೂಲ್ ವಿದ್ಯಾರ್ಥಿನಿಯರು
ಚೆನ್ನೈ: ತಮಿಳುನಾಡಿನ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಚಲಿಸುತ್ತಿದ್ದ ಬಸ್ಸಿನಲ್ಲೇ ಮದ್ಯ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋ ಅನ್ನು ವಿದ್ಯಾರ್ಥಿಯೊಬ್ಬರು ರೆಕಾರ್ಡ್ ಮಾಡಿದ್ದಾನೆ ಎನ್ನಲಾಗಿದೆ. ಈ ವಿಡಿಯೋ ದಲ್ಲಿ ಹುಡುಗಿಯರು ಮತ್ತು ಹುಡುಗರ ಗುಂಪು ಬಿಯರ್ ಬಾಟಲಿಯನ್ನು ತೆರೆದು ಸೇವಿಸುವುದನ್ನು ತೋರಿಸುತ್ತದೆ.
ಮಂಗಳವಾರ ತಿರುಕಝಕುಂದ್ರಂನಿಂದ ಥಾಚೂರಿಗೆ ತೆರಳುತ್ತಿದ್ದ ಬಸ್ಸನ್ನು ಹತ್ತಿದ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಬ್ಯಾಗಿನಿಂದ ಬಿಯರ್ ಬಾಟೆಲ್ ಒಂದನ್ನು ತೆಗೆದು ಕುಡಿಯಲಾರಂಭಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಚೆಂಗಲ್ಪಟ್ಟುವಿನ ಸರ್ಕಾರಿ ಶಾಲೆಯವರು ಎಂದು ನಂಬಲಾಗಿದೆ.
ಆರಂಭದಲ್ಲಿ ಇದು ಹಳೆಯ ವಿಡಿಯೋ ಎಂದು ಭಾವಿಸಲಾಗಿತ್ತು, ನಂತರ ಮಂಗಳವಾರದಂದು ಈ ಘಟನೆ ನಡೆದಿರುವುದು ಪತ್ತೆಯಾಗಿದೆ.




