May 11, 2026

ಕಂದಕಕ್ಕೆ ಬಿದ್ದ ಖಾಸಗಿ ಬಸ್: 6 ಮಂದಿಗೆ ಗಾಯ: ದತ್ತಪೀಠದಿಂದ ಹಿಂತಿರುಗುತ್ತಿದ್ದ ವೇಳೆ ಘಟನೆ

0
image_editor_output_image537535490-1648134812440.jpg

ಚಿಕ್ಕಮಗಳೂರು: ದತ್ತಪೀಠದಿಂದ ವಾಪಾಸಾಗುವ ವೇಳೆ ಖಾಸಗಿ ಬಸ್ ವೊಂದು ಕಂದಕಕ್ಕೆ ಉರುಳಿದ ಘಟನೆ ದತ್ತಪೀಠ ಮಾರ್ಗದ ಅತ್ತಿಗುಂಡಿ ಬಳಿ ನಡೆದಿದೆ.

ಬಸ್ ನಲ್ಲಿ 7 ಜನರು ಪ್ರಯಾಣಿಸುತ್ತಿದ್ದರು. 6 ಜನ ಆಸ್ಪತ್ರೆ ದಾಖಲಾಗಿದ್ದಾರೆ. ಮೂರು ವರ್ಷದ ಮಗು ಪಾರಾಗಿದ್ದಾಳೆ. ವೃದ್ದೆಯೊಬ್ಬರ ಸ್ಥಿತಿ ಗಂಭೀರವಾಗಿದೆ. ಒಬ್ಬರ ಕೈಗೆ ಪೆಟ್ಟಾಗಿದ್ದು ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಗಾಯಾಳುಗಳನ್ನು ಚಿಕ್ಕಮಗಳೂರು ನಗರದ ಸರ್ಕಾರಿ ಮಲ್ಲೇಗೌಡ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ ನಲ್ಲಿ ಪ್ರಯಾಣಿಸುತ್ತಿದ್ದವರು ಎಲ್ಲಿಯವರು ಎಂಬ ಮಾಹಿತಿ ತಿಳಿದು ಬರಬೇಕಿದೆ.

ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Leave a Reply

Your email address will not be published. Required fields are marked *

error: Content is protected !!