May 11, 2026

ರಾಯಿಟರ್ಸ್‌ ಸಂಸ್ಥೆಯ ಪತ್ರಕರ್ತೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

0
image_editor_output_image571325175-1648098993954.jpg

ಬೆಂಗಳೂರು: ರಾಯಿಟರ್ಸ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತೆ ಶ್ರುತಿ (35) ಎಂಬುವರ ದೇಹವು ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪತಿ ಅನೀಶ್‌ ಕೊಯಾಡನ್‌ ಕೊಲೆ ಮಾಡಿರುವುದಾಗಿ ಆಕೆಯ ಕುಟುಂಬದವರು ದೂರು ನೀಡಿದ್ದಾರೆ. ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘2017ರಲ್ಲಿ ಶ್ರುತಿ ಹಾಗೂ ಅನೀಶ್‌ ವಿವಾಹವಾಗಿತ್ತು. ಬೆಂಗಳೂರಿಗೆ ಮರಳಿದ್ದ ದಂಪತಿ ವೈಟ್‌ಫೀಲ್ಡ್‌ನ ನಲ್ಲೂರುಹಳ್ಳಿ ರಸ್ತೆ ಬಳಿಯ ಎಸ್‌.ವಿ.ಮೈಪೇರ್‌ ವಸತಿ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ವಾಸವಿತ್ತು.

ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಅನೀಶ್‌, ಪ್ರತಿನಿತ್ಯ ಶ್ರುತಿಗೆ ಚಿತ್ರಹಿಂಸೆ ನೀಡುತ್ತಿದ್ದ. ಸಂಬಳದ ಹಣವನ್ನೆಲ್ಲಾ ತವರು ಮನೆಗೆ ನೀಡುತ್ತೀಯಾ ಎಂದು ಹೇಳಿ ಹಲ್ಲೆ ನಡೆಸುತ್ತಿದ್ದ. ಒಮ್ಮೊಮ್ಮೆ ಮದ್ಯಪಾನ ಮಾಡಿ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎಂದು ಶ್ರುತಿ ಸಹೋದರ ನಿಶಾಂತ್‌ ನಾರಾಯಣನ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!