March 20, 2026

ಎಲಿಮಲೆ ಸರ್ಕಾರಿ ಶಾಲೆಯಲ್ಲಿ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ

0
IMG-20220323-WA0013.jpg

ಸುಳ್ಯ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾ ಘಟಕದ ವತಿಯಿಂದ ನಡೆಯುವ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ 30 ನೇ ಸಮಾರಂಭ ಎಲಿಮಲೆ ದ.ಕ.ಜಿ ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾ. 22ರಂದು ನಡೆಯಿತು.

ಅಭಿಯಾನದ ಬಗ್ಗೆ ಸಂಘಟಕ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾ ಅಧ್ಯಕ್ಷ ಉನೈಸ್ ಪೆರಾಜೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ರಾಜ್ಯದಾದ್ಯಂತ ನೂರಾರು ಸರ್ಕಾರಿ ಶಾಲೆಗಳಿಗೆ ಆಟೋಟ ಸಾಮಾಗ್ರಿಗಳ ಕೊಡುಗೆಗಳನ್ನು ನೀಡಿದ ಸುನಿತಾ ಮಹೇಶ್ವರಿ, ಅರ್ಜುನ್ ಕಲ್ಯಾಣ್ ಪುರ ರವರು ನೀಡಿದ ಜಾರುಬಂಡಿ ಮತ್ತು ಆಟೋಪ ಕರಣಗಳನ್ನು ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಸುಲೋಚನಾ ದೇವ ರವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ದೇವಚಳ್ಳ ಗ್ರಾ ಪಂ ಸದಸ್ಯ ಶೈಲೇಶ್ ಅಂಬೆಕಲ್ಲು, ನೆಲ್ಲೂರು ಕೆಮ್ರಾಜೆ ಗ್ರಾ ಪಂ ಸದಸ್ಯ ವೇಣುಗೋಪಾಲ್, ದೇವಚಳ್ಳ ಗ್ರಾ ಪಂ ಸದಸ್ಯೆ ಪ್ರೇಮಲತಾ ಅಲ್ಪಸಂಖ್ಯಾತ ಸೊಸೈಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆಯವರು ಸಭೆಯನ್ನುದ್ದೇಶಿಸಿ ಮಾತನಾಡಿ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಶಾಲಾ ಎಸ್ಡಿಎಂಸಿ ಅಧ್ಯಕ್ಷ ರಮಾನಂದ ಸಭಾ ಅಧ್ಯಕ್ಷತೆ ವಹಿಸಿದ್ದರು.
ನೆಲ್ಲೂರು ಕೆಮ್ರಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆ ತೋಟ ಸ್ಮಾರ್ಟ್ ರೂಮ್ ಉದ್ಘಾಟಿಸಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ಸಂತೋಷ್ ,ಸುನಿತಾ, ಜೋಸೆಫ್ ಎಂ.ಎ. ,ಸತೀಶ್ ಕುಲಾಲ್, ಗುರುಮೂರ್ತಿ,ಆಶೀಕ್. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಪ್ರಸಾದ್, ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಊರಿನ ಕೊಡುಗೈ ಧಾನಿಗಳಿಂದ ಶಾಲಾ ರಸ್ತೆಗೆ ಇಂಟರ್ಲಾಕ್, ಕೈ ತೊಳೆಯುವ ಬೇಸಿನ್, ಸ್ಮಾರ್ಟ್ ರೂಮ್ ಹೀಗೆ ಹಲವಾರು ಕಾರ್ಯಕ್ರಮ ವನ್ನು ಉದ್ಘಾಟನೆ ನೆರವೇರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಶ್ರೀಧರ ಗೌಡ ಸ್ವಾಗತಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳ ಪೋಷಕರು ಎಸ್ಡಿಎಂಸಿ ಸದಸ್ಯರು ಸ್ಥಳೀಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!