February 3, 2026

ಉಳ್ಳಾಲ: ಮಹಿಳೆಯ ಜೊತೆ ಅಸಭ್ಯ ವರ್ತನೆ: ರಿಕ್ಷಾ ಚಾಲಕನ ಬಂಧನ

0
Screenshot_20220322-175103_Chrome.jpg

ಮಂಗಳೂರು: ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ರಿಕ್ಷಾ ಚಾಲಕನೊಬ್ಬನನ್ನು ಉಳ್ಳಾಲ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಮುನ್ನೂರು ಗ್ರಾಮದ ಸಮೀರ್ (22) ಎಂದು ಗುರುತಿಸಲಾಗಿದೆ.

ಮಾ.21 ರಂದು ಮಹಿಳೆಯೊಬ್ಬರು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಿಕ್ಷಾವೊಂದನ್ನು ಹತ್ತಿದ್ದಾರೆ. ಮಹಿಳೆ ರಿಕ್ಷಾ ಹತ್ತಿದ ಕೂಡಲೇ ಪರಿಚಯ ಮಾಡಿಕೊಂಡ ಆರೋಪಿ ಸಮೀರ್, ಯಾವುದೇ ತುರ್ತು ಸಂದರ್ಭದಲ್ಲಿ ಕರೆ ಮಾಡುವಂತೆ ಸೂಚಿಸಿ ಮಹಿಳೆಗೆ ತನ್ನ ಮೊಬೈಲ್ ನಂಬರ್ ನೀಡಿದ್ದಾನೆ. ಜೊತೆಗೆ ಅಶ್ಲೀಲವಾಗಿ ಮಾತನಾಡಿದ್ದಲ್ಲದೇ ರಿಕ್ಷಾದಲ್ಲಿಯೇ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ನಡೆಸಲೆತ್ನಿಸಿರುವುದಾಗಿ ಆರೋಪಿಸಲಾಗಿದೆ.

ಈ ಬಗ್ಗೆ ಮಹಿಳೆಯು ಮನೆಗೆ ಬಂದು ತನ್ನ ಮಗನಲ್ಲಿ ವಿಚಾರ ತಿಳಿಸಿದ್ದು, ಈ ಬಗ್ಗೆ ವಿಚಾರಿಸಲು ರಿಕ್ಷಾ ಚಾಲಕನ ಬಳಿ ಹೋದಾಗ ಆರೋಪಿ ಬೆದರಿಸಿದ್ದಾನೆ. ಪ್ರಕರಣ ಸಂಬಂಧ ಮಹಿಳೆಯು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ರಿಕ್ಷಾವನ್ನು ವಶಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!