February 4, 2026

ಅಲ್ಲಿಪಾದೆ: ಉರುಳಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

0
image_editor_output_image-1295122367-1647928057237.jpg

ಬಂಟ್ವಾಳ: ಉರುಳಿಗೆ ಬಿದ್ದು ಜೀವನ್ಮರಣ ಹೋರಾಟದಲ್ಲಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆಯ ನೇತ್ರತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಅರಣ್ಯಿಇಲಾಖೆಯವರು ರಕ್ಷಿಸಿ ಪಿಲಿಕುಳಕ್ಕೆ ಹಸ್ತಾಂತರ ಮಾಡಲಾಗಿದೆ.

ಅಲ್ಲಿಪಾದೆ ಸಮೀಪದ ದೇವಶ್ಯಪಡೂರು ಗ್ರಾಮದ ಬೀಜಪ್ಪಾಡಿ ಎಂಬಲ್ಲಿ ಕಾಡಿನಲ್ಲಿ ಯಾರೋ ಇಟ್ಟಿದ್ದ ಉರುಳಿಗೆ ಸುಮಾರು 6 ವರ್ಷ ಪ್ರಾಯದ ಗಂಡು ಚಿರತೆಯೊಂದು ಉರುಳಿ ಗೆ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿ ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದರು.

ಕೂಡಲೇ ಸ್ಥಳಕ್ಕೆ ಧಾವಿಸಿದ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ನೇತ್ರತ್ವದಲ್ಲಿ ರಾತ್ರಿ ಸುಮಾರು 9 ಗಂಟೆಯಿಂದ ಮುಂಜಾನೆ 4. ಗಂಟೆ ವರೆಗೆ ಕಾರ್ಯಚರಣೆ ನಡೆಸಿ ಚಿರತೆಯನ್ನು ರಕ್ಷಣೆ ಮಾಡಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!