February 2, 2026

ವಿಟ್ಲ: ಮಾರ್ಚ್ 25ರಂದು ಪುಣಚ ಪರಿಯಾಲ್ತಡ್ಕ ನವೀಕೃತ ಮಸೀದಿ ಉದ್ಘಾಟನಾ ಸಮಾರಂಭ:

0
image_editor_output_image62552838-1647848208416.jpg

ವಿಟ್ಲ: ಪುಣಚ ಗ್ರಾಮದ ಪರಿಯಾಲ್ತಡ್ಕ ಮುಹ್ ಯಿದ್ದೀನ್ ಜುಮಾ ಮಸೀದಿಯ ನವೀಕೃತ ಮಸೀದಿಯ ಉದ್ಘಾಟನಾ ಸಮಾರಂಭ ಮತ್ತು ಧಾರ್ಮಿಕ ಪ್ರವಚನ ಮಾರ್ಚ್ 25ರ ಶುಕ್ರವಾರ ಮಧ್ಯಾಹ್ನ ನಡೆಯಲಿದೆ ಎಂದು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಎಂ.ಎಸ್ ಮಹಮ್ಮದ್ ತಿಳಿಸಿದರು.

ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸುಮಾರು ಅಂದಾಜು 80 ಲಕ್ಷ ರೂ. ವೆಚ್ಚದಲ್ಲಿ ಮಸೀದಿ ನಿರ್ಮಾಣಗೊಂಡಿದ್ದು, ಉದ್ಘಾಟನಾ ಸಮಾರಂಭಕ್ಕೆ ಸರ್ವ ಧರ್ಮದ ಮುಖಂಡನ್ನು ಆಹ್ವಾನಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಕೆ.ಎಸ್ ಅಲೀ ತಂಙಳ್ ಕುಂಬೋಳ್ ಮಸೀದಿಯನ್ನು ಉದ್ಘಾಟಿಸಲಿದ್ದಾರೆ.
ಮಂಗಳೂರು ಖಾಝಿ ತ್ವಾಖಾ ಅಹಮ್ಮದ್ ಮುಸ್ಲಿಯಾರ್ ವಕ್ಫ್ ನಿರ್ವಹಣೆ ಮಾಡಲಿದ್ದಾರೆ. ಉಡುಪಿ ಸಂಯುಕ್ತ ಖಾಝಿ ಝೈನುಲ್ ಉಲಮಾ ಹಾಜಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಆಶೀರ್ವಚನ ನೀಡಲಿದ್ದಾರೆ. ಇಬ್ರಾಹಿಂ ಪೂಕುಂಞ ತಂಙಳ್ ಉದ್ಯಾವರ ದುವಾ ದುವಾಃ ನಿರ್ವಹಿಸಲಿದ್ದಾರೆ. ಸೈಯದ್ ಮಹಮ್ಮದ್ ಶಾಫಿ ತಂಞಳ್ ಪಾನೂರ್ ಮತ್ತು ಮಹಮೂದುಲ್ ಫೈಝಿ ವಾಲೆಮುಂಡೋವು ಉಸ್ತಾದ್ ಭಾಗವಹಿಸಲಿದ್ದಾರೆ ಎಂದರು.

ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭವನ್ನು ಪರಿಯಾಲ್ತಡ್ಕ ಜುಮ್ಮಾ ಮಸೀದಿ ಖತೀಬು ಹಸೈನಾರ್ ಫೈಝಿ ಉದ್ಘಾಟಿಸಲಿದ್ದಾರೆ. ರಾಜ್ಯ ವಕ್ಫ್ ಅಧ್ಯಕ್ಷ ಶಾಫಿ ಸ ಅದಿ ಮತ್ತು ಮತ್ತು ಪರಿಯಾಲ್ತಡ್ಕ ಜುಮ್ಮಾ ಮಸೀದಿ ಗೌರವಾಧ್ಯಕ್ಷ ಹಾಜಿ ಯು.ಟಿ ಮೂಸಕುಂಞ ಅವರನ್ನು ಸನ್ಮಾಸಲಾಗುವುದು ಎಂದ ಅವರು ಶಾಸಕ ಯು.ಟಿ ಖಾದರ್, ಮಾಜಿ ಸಚಿವ ಬಿ ರಮಾನಾಥ ರೈ, ಪಿಎಫ್ ಐ ರಾಜ್ಯ ಕಾರ್ಯದರ್ಶಿ ಎ.ಕೆ ಅಶ್ರಪ್, ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಎಸ್ ಆರ್ ರಂಗಮೂರ್ತಿ, ಮನೆಲ ಚರ್ಚ್ ನ ಧರ್ಮಗುರು ಪಾವ್ಲ್ ಡಿ ಸೋಜ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಪುಣಚ ಗ್ರಾ.ಪಂ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು, ಎಸ್ ಕೆ ಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಎಸ್ ಎಸ್ ಎಫ್ ಇಹ್ ಸಾನ್ ರಾಜ್ಯ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಪಿ ಕನ್ಯಾನ, ಬಂಟ್ವಾಳ ಸಂಯುಕ್ತ ಜಮಾಅತ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು, ಪುತ್ತೂರು ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಕೆ.ಪಿ ಮಹಮ್ಮದ್, ಮೊದಲಾದವರು ಭಾಗವಹಿಸಲಿದ್ದಾರೆ.

ರಾತ್ರಿ ನಡೆಯುವ ಕಾರ್ಯಕ್ರಮದಲ್ಲಿ ಅಬೂಬಕ್ಕರ್ ಸಿದ್ದೀಕ್ ರಝ್ವಿ ಉದ್ಘಾಟಿಸಲಿದ್ದಾರೆ. ಅಬೂಬಕ್ಕರ್ ಸಿದ್ದೀಕ್ ಅಝ್ ಹರಿ ಪಯ್ಯನ್ನೂರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಬಿಕಾಂ, ಉಪಾಧ್ಯಕ್ಷ ಯು.ಟಿ ಮಹಮ್ಮದ್ ಅಲಿ, ಸದಸ್ಯರಾದ ಇಸ್ಮಾಯಿಲ್ ನಾಟೆಕಲ್ಲು, ಶಂಸುದ್ದೀನ್ ಅಜ್ಜಿನಡ್ಕ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!