ಟೀಚರುಂ, ಕುಟ್ಟಿಯುಂ ಪದ್ಧತಿ ಸಮಾರೋಪ
ಮಂಜೇಶ್ವರ: ಹರಿತ ಕೇರಳ ಮಿಷನ್ ಕಾಸರಗೋಡು, ಹರಿತ ಕರ್ಮಸೇನೆ ವರ್ಕಾಡಿ ಗ್ರಾಮ ಪಂಚಾಯತ್ ನೇತ್ರತ್ವದಲ್ಲಿ ಟೀಚರುಂ ಕುಟ್ಟಿಯುಂ ಪದ್ಧತಿಯ ಅಂಗವಾಗಿ ಅಜೈವ ಮಾಲಿನ್ಯ ಪರಿಪಾಲನೆಯಲ್ಲಿ ಮಕ್ಕಳ ಸಹಾಭಾಗಿತ್ವ ಪ್ಲಾಸ್ಟಿಕ್ ವಿಂಗಡಣೆ ಬಗೆಗೆ ಮಕ್ಕಳಿಗೆ ಅರಿವು ಮೂಡಿಸುವ ಪಂಚಾಯತ್ ಮಟ್ಟದ ಕಾರ್ಯಕ್ರಮಕ್ಕೆ ಸುಳ್ಯಮೆ ಯಲ್ಲಿ ನಡೆಯಿತು.
ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಭಾರತಿ ಎಸ್ ರವರು ಈ ಪದ್ಧತಿಗೆ ಚಾಲನೆ ನೀಡಿದರು.
ಪಂಚಾಯತ್ AS ರಾಜೇಶ್ಚಂದ್ರನ್, ಕುಟುಂಬಶ್ರೀ CDS ಅಧ್ಯಕ್ಷೆ ವೀತಾ ಎಚ್ ಪ್ರಸಾದ್, ಅಧ್ಯಾಪಕ ರವೀಂದ್ರ ಎಂ, ಹರಿತ ಕರ್ಮ ಸೇನೆಯವರು, ಮಕ್ಕಳು ಉಪಸ್ಥಿತರಿದ್ದರು.





