August 21, 2026

ಹಿಂದೂಗಳೆಲ್ಲರೂ ಒಳ್ಳೆಯವರಲ್ಲ: ಸಚಿವ ಸೋಮಣ್ಣ

0
IMG-20220318-WA0005.jpg

ಚಾಮರಾಜನಗರ: ”ಎಲ್ಲ ಮುಸ್ಲಿಮರು‌ ಕೆಟ್ಟವರಲ್ಲ, ಹಿಂದೂಗಳೆಲ್ಲರೂ ಒಳ್ಳೆಯವರಲ್ಲ. ಕಾಶ್ಮೀರ‌ ಫೈಲ್ಸ್ ಚಿತ್ರವನ್ನು ಮುಸ್ಲಿಮರೂ ನೋಡ್ತಾರೆ. ಇತಿಹಾಸದಲ್ಲಿ ನಡೆದ ಘಟನೆ ಮುಂದೆ ಪುನರಾವರ್ತನೆಯಾಗಬಾರದು ಎಂಬ ಉದ್ದೇಶದಿಂದ ಸಿನಿಮಾ ಬಂದಿದೆ” ಎಂದು ವಸತಿ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಹೇಳಿದರು.

ಕೊಳ್ಳೇಗಾಲದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ”ಕಾಶ್ಮೀರಕ್ಕೆ ನಾನೂ ಹಲವು ಬಾರಿ ಹೋಗಿದ್ದೇನೆ. ಅದು ಹೇಗಿದೆ ಎಂಬುದು ಗೊತ್ತಿದೆ. ಹಿಂದೆ ನಡೆದ ವಾಸ್ತವವನ್ನು ಜನರ ಮುಂದೆ ಸಿನಿಮಾ ಇಟ್ಟಿದೆ. ಮುಂದೆ ಇಂತಹದ್ದು ನಡೆಯಬಾರದು ಎಂಬುದು ಉದ್ದೇಶ. ಇದರಲ್ಲಿ ಯಾರದೇ ಪ್ರಾಯೋಜಕತ್ವ ಇಲ್ಲ” ಎಂದರು.

Leave a Reply

Your email address will not be published. Required fields are marked *

You may have missed

error: Content is protected !!