August 21, 2026

ನಾಳೆಯ ಕರ್ನಾಟಕ ಬಂದ್ ಗೆ ಬೆಳ್ತಂಗಡಿ ಮುಸ್ಲಿಂ ಒಕ್ಕೂಟ ಸಂಪೂರ್ಣ ಬೆಂಬಲ

0
IMG-20220316-WA0036.jpg

ಬೆಳ್ತಂಗಡಿ: ಕರ್ನಾಟಕ ಅಮೀರ್ ಎ ಶರೀಯತ್ ಮುಖ್ಯಸ್ಥರಾದ ಮೌಲಾನ ಸಗೀರ್ ಅಹಮ್ಮದ್‌ರವರು, ಇತ್ತೀಚೆಗಿನ ಕರ್ನಾಟಕ ಉಚ್ಛ ನ್ಯಾಯಾಲಯದ ಹಿಜಾಬ್ ಕುರಿತ ತೀರ್ಪುವಿನಲ್ಲಿ ಇಸ್ಲಾಮಿನಲ್ಲಿ ಮುಸ್ಲಿಮ್ ಮಹಿಳೆಯರಿಗೆ ಹಿಜಾಬ್ ಮಹತ್ವವಲ್ಲ, ಮತ್ತು ಹಿಜಾಬ್ ಇಸ್ಲಾಮಿನಲ್ಲಿ ಹಿಜಾಬ್ ಅವಿಭಾಜ್ಯ ಅಂಗ ವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುವಿಕೆಯನ್ನು ವಿಮರ್ಶಿಸಿ ಕರ್ನಾಟಕ ದ್ಯಂತ ಮಾರ್ಚ್ 17 ರಂದು ಸ್ವಯಂ ಪ್ರೇರಿತ ವ್ಯವಹಾರ ಸ್ಥಗಿತಕ್ಕೆ ಕರೆ ನೀಡಿದ್ದು, ಈ ಕರೆಗೆ ಬೆಳ್ತಂಗಡಿ ಮುಸ್ಲಿಮ್ ಒಕ್ಕೂಟ ಬೆಂಬಲ ಸೂಚಿಸಿದೆ.

ತೀರ್ಪು ಸಾಂವಿಧಾನಿಕ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಮತ್ತು ಶಿಕ್ಷಣ ಹಕ್ಕುಗಳನ್ನು ಕಸಿದು ಕೊಳ್ಳುವ ಸ್ಥಿತಿಯನ್ನು ನಿರ್ಮಾಣ ಮಾಡಿದೆ. ಈ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಸ್ವಯಂ ಪ್ರೇರಿತ ಶಾಂತಿಯುತ ವ್ಯವಹಾರ ಸ್ಥಗಿತ ಮಾಡಬೇಕಾಗಿ ವಿನಂತಿ ಮತ್ತು ಈ ಸ್ಥಗಿತ ಶಾಂತಿಯುತ ವಾಗಿರುತ್ತದೆ.ಕಾನೂನು, ಶಾಂತಿ ಸುವ್ಯವಸ್ಥೆ ಪಾಲನೆಗೆ ಪೂರಕ ವಾಗಿರಲಿ ಎಂದು ಕರೆ ನೀಡಲಾಗಿದೆ ಎಂದು ಬೆಳ್ತಂಗಡಿ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಬಿ.ಎ. ನಝೀರ್ ಬೆಳ್ತಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!