March 22, 2026

ಹಿಜಾಬ್ ಗೂ ಹಿಂದೂ ಮುಖಂಡರಿಗೂ ಏನು ಸಂಬಂಧ?: ನವೀನ್ ಸೂರಿಂಜೆ

0
image_editor_output_image758077393-1647408094886.jpg

ಮಂಗಳೂರು: ಖ್ಯಾತ ಬರಹಗಾರ ನವೀನ್ ಸೂರಿಂಜೆ ಅವರು ಹಿಜಾಬ್ ವಿಚಾರದಲ್ಲಿ ಬುರ್ಕಾ/ಸ್ಕಾರ್ಫ್/ಹಿಜಾಬ್ ತೀರ್ಪಿನ ಬಗ್ಗೆ ಹಿಂದೂ ಮುಖಂಡರು, ಸ್ವಾಮೀಜಿಗಳು ಯಾಕೆ ಹೇಳಿಕೆ ಕೊಡುತ್ತಿದ್ದಾರೆ ? ಹಿಜಾಬ್ ಗೂ ಹಿಂದೂ ಮುಖಂಡರಿಗೂ ಏನು ಸಂಬಂಧ ? ಎಂದು ಪ್ರಶ್ನಿಸಿದ್ದಾರೆ.

ಕೃಪೆ: ಫೇಸ್ ಬುಕ್ ಬರಹ

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನೀಡಿ ಕೋರ್ಟ್ ತೀರ್ಪು ಕೊಟ್ಟಿತ್ತು. ಆಗ ಯಾವ ಮುಸ್ಲಿಂ ಧರ್ಮಗುರುಗಳೂ, ಮುಸ್ಲಿಂ ಮುಖಂಡರೂ ಮೀಡಿಯಾದಲ್ಲಿ ಮಾತನಾಡಿಲ್ಲ. ಬ್ರಾಹ್ಮಣರ ಎಂಜಲೆಲೆಯಲ್ಲಿ ಉರುಳಾಡೋ ಮಡೆ ಮಡೆಸ್ನಾನ ನಿಲ್ಲಿಸಿ ಎಂದು ಹೈಕೋರ್ಟ್ ತೀರ್ಪು ನೀಡಿದಾಗ ಯಾವ ಮುಸ್ಲಿಂ ಮುಖಂಡರೂ ಸಂಭ್ರಮಿಸಿ ಹೇಳಿಕೆ ಕೊಟ್ಟಿಲ್ಲ. ಪೇಜಾವರ ಮಠದಲ್ಲಿ ಪಂಕ್ತಿಬೇದ ಸರಿಯೋ ತಪ್ಪೋ ಎಂಬ ಚರ್ಚೆಗೂ ಯಾವ ಮುಸ್ಲಿಂ ಧರ್ಮಗುರುಗಳೂ ಮಧ್ಯಪ್ರವೇಶ ಮಾಡಿಲ್ಲ. ಈಗ ಬುರ್ಕಾ/ಸ್ಕಾರ್ಫ್/ಹಿಜಾಬ್ ತೀರ್ಪಿನ ಬಗ್ಗೆ ಹಿಂದೂ ಮುಖಂಡರು, ಸ್ವಾಮೀಜಿಗಳು ಯಾಕೆ ಹೇಳಿಕೆ ಕೊಡುತ್ತಿದ್ದಾರೆ ? ಹಿಜಾಬ್ ಗೂ ಹಿಂದೂ ಮುಖಂಡರಿಗೂ ಏನು ಸಂಬಂಧ ? ಎಂದು ನವೀನ್ ಸೂರಿಂಜೆ ಫೇಸ್ ಬುಕ್ನಲ್ಲಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!