February 4, 2026

ಮಂಗಳೂರು ಭೂಮಿಕಾ ಟೆಕ್ಸ್ ಟೈಲ್ ಮಾಲಕಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

0
image_editor_output_image-457622522-1647407670456.jpg

ಮಂಗಳೂರು: ನಗರದ ಭೂಮಿಕಾ ಟೆಕ್ಸ್ ಟೈಲ್ಸ್ ಮಾಲಕಿ ಸುಮಾ ಸತೀಶ್ ಮಂಗಳವಾರ ನಸುಕಿನ ವೇಳೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಣ್ಣಗುಡ್ಡೆಯ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ಅವರು, ಅನಾರೋಗ್ಯದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಇದೆ. ಸುಮಾ ಸತೀಶ್ ಅವರು ಸತೀಶ್ ಪಿ ಕೆ ಅವರ ಪತ್ನಿ ಮತ್ತು ಉದ್ಯಮಿ ಪಿ. ಕೆ ದೂಜಾ ಪೂಜಾರಿ ಅವರ ಸೊಸೆಯಾಗಿದ್ದಾರೆ.

ಸುಮಾ ಸತೀಶ್ ರವರು ಉದ್ಯಮಿಯಾಗಿ ಮಾತ್ರವಲ್ಲದೆ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. ಅಲ್ಲದೇ ಲಯನ್ಸ್ ಕ್ಲಬ್ ನ ಸದಸ್ಯರು ಆಗಿದ್ದಾರೆ.

ಈ ಕುರಿತು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮಾತನಾಡಿ, ” ಕ್ಯಾನ್ಸರ್ ಇರುವ ಬಗ್ಗೆ ತಿಳಿದುಬಂದಿದ್ದು ಈ ಹಿನ್ನಲೆಯಲ್ಲಿ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ “ಎಂದು ಶಂಕೆ ವ್ಯಕ್ತಪಡಿಸಿದ್ದಾರೆ

ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!