February 2, 2026

ಕೋರ್ಟ್‌ಗೆ ಹೋದ ಆರು ಮಂದಿ ವಿದ್ಯಾರ್ಥಿನಿಯರು ನಾಳೆಯಿಂದಲೇ ತರಗತಿಗೆ ಬರಬೇಕು: ಶಾಸಕ ರಘುಪತಿ ಭಟ್

0
Screenshot_2022-03-15-11-33-35-16_680d03679600f7af0b4c700c6b270fe7.jpg

ಉಡುಪಿ: ಕೋರ್ಟ್‌ಗೆ ಹೋದ ಆರು ಮಂದಿ ವಿದ್ಯಾರ್ಥಿನಿಯರು ನಾಳೆಯಿಂದಲೇ ತರಗತಿಗೆ ಬರಬೇಕು. ಅವರೆಲ್ಲರಿಗೂ ಸಮವಾದ ಶಿಕ್ಷಣ ನೀಡುತ್ತೇವೆ. ಇಷ್ಟು ದಿನ ಅವರ ಶಿಕ್ಷಣಕ್ಕೆ ಸಮಸ್ಯೆ ಆಗಿದ್ರೆ, ಅವರಿಗೆ ಪ್ರತ್ಯೇಕ ನೋಟ್ಸ್ ನೀಡಲಾಗುತ್ತದೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಸತ್ಯ‌ಮೇವ ಜಯತೇ’ ಉಚ್ಛ ನ್ಯಾಯಾಲಯದ‌ ತೀರ್ಪಿನ ಮೂಲಕ ಭಾರತದ ಸಂಸ್ಕೃತಿಗೆ ಜಯವಾಗಿದೆ, ಈ ಮಣ್ಣಿನ ವಿರೋಧಿಗಳು ಸೋಲು ಕಂಡಿದ್ದಾರೆ. ಸಮವಸ್ತ್ರದ ಕುರಿತು ಕರ್ನಾಟಕ ಹೈಕೋರ್ಟ್‌ ಹೊರಡಿಸಿದ ತೀರ್ಪನ್ನು ಅತ್ಯಂತ ಸಂತೋಷದಿಂದ ಸ್ವಾಗತಿಸುತ್ತೇನೆ. ಇದು ನಮ್ಮ ಸಂವಿಧಾನಕ್ಕೆ ಲಭಿಸಿದ ಜಯ. ಮತಾಂಧತೆ ಕೊನೆಯಾಗಲಿ, ಕಾನೂನಿನ ಪಾಲನೆಯಾಗಲಿ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!