ಕನ್ಯಾನ ಮಖಾಂ ಉರೂಸ್ ಸಮಾರೋಪಕ್ಕೆ ಖಲೀಲ್ ತಂಙಲ್ ಶಾಫಿ ಸಅದಿ ,ಝೈನಿ ಆಗಮನ: ಯಶಸ್ವಿಗೆ ಜಮಾಅತ್ ಪ್ರವಾಸಿಗಳು ಕರೆ
ಕನ್ಯಾನ: ಮಾರ್ಚ್ 3 ರಂದು ಪ್ರಾರಂಭಗೊಂಡು 13 ರಂದು ಪರಿಸಮಾಪ್ತಿ ಗೊಳ್ಳಲಿರುವ ಹತ್ತು ದಿನಗಳ ಇತಿಹಾಸ ಪ್ರಸಿದ್ಧ ಕನ್ಯಾನ ಹಝ್ರತ್ ಶಾಹುಲ್ ಹಮೀದ್ ವಲಿಯುಲ್ಲಾಹಿರವರ ಉದಯಸ್ತಮಾನ ಊರೂಸ್ ಮುಬಾರಕಿನ ಸಮಾರೋಪ ಸಮಾರಂಭಕ್ಕೆ ಇಂದು ಮಗ್ರಿಬ್ ನಮಾಜ್ ಬಳಿಕ ಬದುರುಸ್ಸಾದಾತ್ ಅಸಯ್ಯಿದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ತಂಙಲ್ ಕಡಲುoಡಿ ಕೇರಳ ರವರು ದುಆ ಮಜ್ಲಿಸಿಗೆ ನೇತೃತ್ವ ನೀಡಲಿದ್ದಾರೆ ಹಾಗೂ ವಕ್ಫ್ ಬೋಡ್೯ ಅಧ್ಯಕ್ಷ ಮೌಲಾನ ಶಾಫಿ ಸಅದಿ ಬೆಂಗಳೂರು , ಸೈಯದ್ ಹಬೀಬುಲ್ಲಾಹಿ ತಂಙಲ್ ಪೆರುವಾಯಿ ಮತ್ತು ಇನ್ನಿತರ ಗಣ್ಯರು ಬಾಗವಹಿಸಲಿದ್ದಾರೆ
ಹಾಗೂ ಹಂಝ ಮಿಸ್ಬಾಹಿ ಓಟಪದವು ಮುಖ್ಯ ಪ್ರಭಾಷಣಗೈಯಲಿದ್ದಾರೆ

ಸಂಜೆ ನಡೆಯುವ ಸ್ನೇಹ ಸಂಗಮದಲ್ಲಿ ಡಾ.ಅಬ್ದುಲ್ ರಶೀದ್ ಝೈನಿ, ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ರಮಾನಾಥ ರೈ ಯು.ಟಿ ಕಾದರ್ ಎ ಕೆ ಎಂ ಅಶ್ರಫ್ ಬಾಗವಹಿಸಲಿದ್ದಾರೆ
ಆದಿತ್ಯವಾರ ನಡೆಯುವ ಮೌಲಿದ್ ಮಜ್ಲಿಸಿಗೆ ಕನ್ಯಾನ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಲ್ ಕೂರತ್, ಕೆ.ಎಸ್ ಆಟಕೋಯ ತಂಙಲ್ ಕುಂಬೋಲ್, ಅಸೈಯದ್ ಬದ್ರುದ್ದೀನ್ ತಂಙಲ್ ಚಿಪ್ಪಾರ್ ,ಶೈಖುನಾ ಕನ್ಯಾನ ಉಸ್ತಾದ್ ಮೊದಲಾದವರು ನೇತೃತ್ವ ನೀಡಲಿದ್ದಾರೆ
ಊರ ಪರವೂರ ಸಾವಿರಾರು ಮಂದಿಗೆ ಅನ್ನದಾನ ನಡೆಯಲಿದ್ದು ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಕನ್ಯಾನ ಜಮಾಅತ್ ಪ್ರವಾಸಿಗಳು ಕರೆ ನೀಡಿದ್ದಾರೆ




