February 3, 2026

ಉಡುಪಿ: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವೀಡಿಯೊ‌ ಅಪ್ಲೋಡ್: ಮೂವರ ವಿರುದ್ಧ ಪ್ರಕರಣ ದಾಖಲು

0
Screenshot_2022-03-12-11-29-34-43_680d03679600f7af0b4c700c6b270fe7.jpg

ಉಡುಪಿ: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋಗಳನ್ನು ಹಾಕಿದ ಆರೋಪದ ಮೇಲೆ ಜಿಲ್ಲೆಯ ಮೂವರ ವಿರುದ್ಧ ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾರಕೂರು ಹನೇಹಳ್ಳಿಯ ಉಡ್ಡಾಲಗುಡ್ಡೆಯ ಆನಂದ್‌ ಎಂಬಾತ 2021ರ ಜ.24ರಂದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ತನ್ನ ಖಾತೆಯಿಂದ ಅಶ್ಲೀಲ ಫೋಟೋ ಅಪ್‌ಲೋಡ್‌ ಮಾಡಿದ್ದು, ಈ ಬಗ್ಗೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರದ ಚಾಂತಾರು ಅಂಗಡಿಬೆಟ್ಟುನ ಕೊಲ್ಜಿನ್‌ ಮೆನೆಜಸ್‌ 2021ರ ಜ.26ರಂದು ಫೇಸ್‌ಬುಕ್‌ ಖಾತೆಯಿಂದ ಅಶ್ಲೀಲ ವೀಡಿಯೋವನ್ನು ಅಪ್‌ಲೋಡ್‌ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಅದೇ ರೀತಿ ಬೊಮ್ಮರಬೆಟ್ಟು ನಿವಾಸಿ ರತ್ನಾಕರ ಎಂಬಾತ 2021ರ ಜ.23ರಮದು ಅಶ್ಲೀಲ ವಿಡಿಯೋ ಒಂದನ್ನು ಇನ್‌ಸ್ಟಾಗ್ರಾಂನ ಮೂಲಕ ಅಪ್‌ಲೋಡ್‌ ಮಾಡಿರುವ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಬೆಂಗಳೂರು ಪೊಲೀಸ್ ಮಹಾ ನಿರ್ದೇಶಕರ ಕಚೇರಿ, ಸಿಐಡಿ ವಿಶೇಷ ಘಟಕ ಹಾಗೂ ಆರ್ಥಿಕ ಅಪರಾಧಗಳ ವಿಭಾಗದಿಂದ ಬಂದ ವರದಿ ಆಧರಿಸಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!