February 3, 2026

ಮುಲ್ಕಿ ಸಮೀಪ ಬ್ಯಾರಿಕೇಡರ್ ಗೆ ಬೈಕ್ ಡಿಕ್ಕಿ ಕಡಬಮೂಲದ ಎಡಮಂಗಲದ ಯುವಕ ಮೃತ್ಯು

0
IMG_20220311_230154.jpg

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪ ಬಪ್ಪನಾಡು ಜಂಕ್ಷನ್ ಬಳಿ ಅಪಘಾತ ತಡೆಗೆ ಇರಿಸಿದ್ದ ಬ್ಯಾರಿಕೇಡರ್‌ಗೆ ಬೈಕ್ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿದ ದಾರುಣ ಘಟನೆ ವರದಿಯಾಗಿದೆ.

ಕಡಬ ತಾಲೂಕು ಎಡಮಂಗಲ ಗ್ರಾಮದ ದೊಣಿಮನೆ ನಿವಾಸಿ ನೊಣಯ್ಯ ಗೌಡ ಎಂಬವರ ಪುತ್ರ, ಮಂಗಳೂರು ಜನನಿ ಕನ್ನಕ್ಷನ್‌ನಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದ ಸಚಿನ್ (28) ಮೃತಪಟ್ಟವರು. ಸಚಿನ್ ಬುಧವಾರ ಬೆಳಿಗ್ಗೆ 3:30 ಗಂಟೆಗೆ ಪಡುಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದಾಗ ಬಪ್ಪನಾಡು ಬಳಿ ನಿಯಂತ್ರಣ ತಪ್ಪಿ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಬಳಿಕ ಅವರ ತಲೆ ಹೆದ್ದಾರಿ ಡಿವೈಡರ್‌ಗೆ ಅಪ್ಪಳಿಸಿದೆ ಎನ್ನಲಾಗಿದೆ.

ಅಪಘಾತದಿಂದ ಗಂಭೀರ ಗಾಯಗೊಂಡ ಸಚಿನ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸುರತ್ಕಲ್ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!