February 3, 2026

ನಿಶ್ಚಿತಾರ್ಥಕ್ಕೆ ಹೊರಟವರು ಮಸಣಕ್ಕೆ: ನಾಲ್ವರು ಸ್ಥಳದಲ್ಲೇ ಸಾವು

0
IMG_20220311_174319.jpg

ಕೊಪ್ಪಳ: ನಿಶ್ಚಿತಾರ್ಥಕ್ಕೆಂದು ಹೊರಟ್ಟಿದ್ದವರ ಟ್ರ್ಯಾಕ್ಟರ್ ಪಲ್ಟಿಯಾಗಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಇಬ್ಬರು ಸ್ಥಿತಿ ಗಂಭೀರವಾಗಿದ್ದು, ಯಮನೂರಪ್ಪ ಸಿಂಧನೂರು(55), ಅಂಬಮ್ಮ(45), ದ್ಯಾವಮ್ಮ(60), ಶೇಶಪ್ಪ ಬಂಡಿ (40)ಅಸುನೀಗಿದ್ದಾರೆ.

ಮೃತರು ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದ ಇಂದಿರಾಗಾಂಧಿ ನಿವಾಸಿಗಳಾಗಿದ್ದು, ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ನವಲಿಯ ರೈಸ್ ಟೆಕ್ನಾಲಜಿ ಪಾರ್ಕ್ ಬಳಿ ಈ ದುರ್ಘಟನೆ ಸಂಭವಿಸಿದೆ.

ಕಾರಟಗಿ ಪಟ್ಟಣದ 18ನೇ ವಾರ್ಡಿನ ನಿವಾಸಿಗಳು ನಿಶ್ಚಿತಾರ್ಥಕ್ಕೆಂದು ಕಾರಟಗಿಯಿಂದ ಕನಕಗಿರಿಗೆ 25ಕ್ಕೂ ಹೆಚ್ಚು ಮಂದಿ ಟ್ಯಾಕ್ಟರ್ ನಲ್ಲಿ ಹೊರಟಿದ್ದರು. ಈ ಸಂದರ್ಭ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಉಳಿದಂತೆ ನಾಲ್ವರ ಸ್ಥಿತಿ ಗಂಭಿರವಾಗಿದೆ. ಗಾಯಾಳುಗಳನ್ನು ಕಾರಟಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಸೇರಿದಂತೆ ಕನಕಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!