March 22, 2026

ಭಾರತೀಯ ಮಹಿಳೆಯರು ಎದುರಿಸುತ್ತಿರುವ ಸಂಕಷ್ಟಗಳು: ನ್ಯಾಷನಲ್ ವಿಮೆನ್ಸ್ ಫ್ರಂಟ್ ಮಾರ್ಚ್ 8.

0
IMG-20220217-WA0032.jpg

ಪ್ರಪಂಚದಾದ್ಯಂತ: ಮಾರ್ಚ್ 8ರಂದು ‘ಅಂತರರಾಷ್ಟ್ರೀಯ ಮಹಿಳಾ ದಿನ’ ಆಚರಿಸುವಂತೆ ನ್ಯಾಷನಲ್ ವಿಮೆನ್ಸ್ ಫ್ರಂಟ್ ಕೇರಳ, ಕರ್ನಾಟಕ, ತಮಿಳ್ನಾಡು, ಆಂಧ್ರ ಪ್ರದೇಶ,ಗೋವಾ ಮತ್ತು ರಾಜಸ್ಥಾನ ರಾಜ್ಯಾದ್ಯಂತ ಬಹಳ ಹೆಮ್ಮೆಯಿಂದ ಈ ದಿನವನ್ನು ಗುರುತಿಸಿ “ಮಹಿಳೆಯರ ರಕ್ಷಣೆ ಕೇವಲ ಘೋಷಣೆಗೆ ಸೀಮಿತವಲ್ಲ,ಅದು ಘನತೆಯ ಹಕ್ಕಾಗಿದೆ”. ಎಂಬ ಶೀರ್ಷಿಕೆಯಡಿಯಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್, ಬೆಂಗಳೂರಿನಲ್ಲಿ ಮಧ್ಯಾಹ್ನ 3:00 ರಿಂದ 5:00 ರವರೆಗೆ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ನಡೆಸುವುದಾಗಿಯೂ ಘೋಷಿಸಿದ್ದೇವೆ.ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿನಿಧಿಗಳು ತಾರತಮ್ಯ, ಅನ್ಯಾಯ ಮತ್ತು ಪ್ರಸ್ತುತ ಭಾರತದಲ್ಲಿ ಮುಸ್ಲಿಂ ಮಹಿಳೆಯರು ಎದುರಿಸುತ್ತಿರುವ ದಬ್ಬಾಳಿಕೆ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.ಪುರುಷ ಪ್ರಾಬಲ್ಯ ಮತ್ತು ಜಾತಿಯತೆಯನ್ನು ನ್ಯಾಯಸಮ್ಮತಗೊಳಿಸಿದ
ಮನುಸ್ಮ್ರತಿಯಂತಹ ಧಾರ್ಮಿಕ ಪಠ್ಯ ಕ್ರಮದಲ್ಲಿ ಹೆಣ್ಣೆನ ಸ್ಥಾನಮಾವು ಕೆಳಮಟ್ಟದ್ದಾಗಿದೆ.

ಸ್ವಯಂ ಘೋಷಿತ ಪ್ರಬಲ ಜಾತಿಯವರಿಂದ ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಂತ ಅಮಾನುಷವಾಗಿ ಪ್ರತಿದಿನ ಅತ್ಯಾಚಾರ ನಡೆಯುತ್ತಿದೆ.ದೆಹಲಿಯು”ವಿಶ್ವದ ಅತ್ಯಾಚಾರದ ರಾಜಧಾನಿ” ಎಂದು ಕುಖ್ಯಾತಿಯನ್ನು ಗಳಿಸಿದೆ.ಅತ್ಯಾಚಾರಳಾದ ಸಂತ್ರಸ್ತೆಯ ಮ್ರತದೇಹವನ್ನು ಅವಳ ಕುಟುಂಬಸ್ಥರಿಗೆ ವಿಷಯವನ್ನು ತಿಳಿಸದೇ ಅಂತ್ಯ ಸಂಸ್ಕಾರ ನಡೆಸುವ ಮತ್ತು ಅತ್ಯಾಚಾರಿಯನ್ನು ವಿವಾಹವಾಗುವಂತೆ ಸಂತ್ರಸ್ತೆಯನ್ನು ನ್ಯಾಯಾಲಯವು ಕೇಳುವಷ್ಟು
ಮಟ್ಟಿಗೆ ವಿಷಯವು ಬಂದು ತಲುಪಿದೆ.ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರಿಗೆ ಅತ್ಯಾಚಾರದ ಬೆದರಿಕೆ ಹಾಕಲಾಗುತ್ತಿದೆ.

9 ತಿಂಗಳ ಮಗು ಕೂಡ ಅವರ ಬೆದರಿಕೆಯಿಂದ ಮುಕ್ತವಾಗಿಲ್ಲ.
ಅರವತ್ತರ ಮೇಲ್ಪಟ್ಟ ಮಹಿಳೆಯನ್ನು ಕೂಡ ಬಿಡದೇ ಸುಲ್ಲಿ ಡೀಲ್ ಮತ್ತು ಬುಲ್ಲಿ ಬಾಯ್ ಆಪ್ ಗಳ ಮೂಲಕ ಮಾನ ಹರಾಜುಗೊಳಿಸಿ ಮುಸ್ಲಿಮ್ ಮಹಿಳೆಯರನ್ನು ಅಮಾನವೀಯಗೊಳಿಸುವ ಸಂಚನ್ನು ಆಯೋಜಿಸುವುದು ಇದರ ಇನ್ನೊಂದು ಮುಖವಾಗಿದೆ.ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣ ಕ್ಷೇತ್ರದಿಂದ ಕಡೆಗಣಿಸಲು ಕರ್ನಾಟಕದಲ್ಲಿ ಸ್ಕಾರ್ಫ್ ಸಮಸ್ಯೆಯು ಒಂದು ಕೀಳು ಮಟ್ಟದ ಪ್ರಯತ್ನವಾಗಿದೆ.ನ್ಯಾಷನಲ್ ವಿಮೆನ್ಸ್ ಫ್ರಂಟ್ ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತದೆ ಮತ್ತು
ಮಹಿಳೆಯರನ್ನು ಅಧಃಪತನಗೊಳಿಸುವ ಮತ್ತು ದುರ್ಬಲಗೊಳಿಸುವ ಫ್ಯಾಸಿಸ್ಟ್ ಅಜೆಂಡಾವನ್ನು ವಿರೋಧಿಸುತ್ತದೆ.ಎಲ್ಲರೂ ಸಮಾನವಾಗಿ ಆನಂದಿಸುವ ಭಾರತವನ್ನು ರಚಿಸಲು ನಮ್ಮೊಂದಿಗೆ ನಿಲ್ಲುವಂತೆ ನಾವು ಎಲ್ಲರೊಂದಿಗೆ ಮನವಿ ಮಾಡುತ್ತಿದ್ದೇವೆ.

Leave a Reply

Your email address will not be published. Required fields are marked *

error: Content is protected !!