March 22, 2026

ಉಳ್ತೂರು: ಮಾರ್ಚ್ 27 ರಂದು ಬ್ರಹತ್ ಬುರ್ದಾ ಮಜ್ಲೀಸ್, ದರ್ಸ್ ವಾರ್ಷಿಕ ಹಾಗೂ ಏಕದಿನ ಮತ ಪ್ರಭಾಷಣ

0
IMG_20220308_200204.jpg

ಉಳ್ತೂರು: ಮುಹಿಯುದ್ದೀನ್ ಜುಮಾ ಮಸೀದಿ,ನೂರುಲ್ ಹುದಾ ದರ್ಸ್ ಉಳ್ತೂರು ಇದರ ವತಿಯಿಂದ ದರ್ಸ್ ವಾರ್ಷಿಕ ಹಾಗೂ ಇಷ್ಕೇ ರಸೂಲ್ ಕಾರ್ಯಕ್ರಮ ಮಾರ್ಚ್ 27ರಂದು ಮುಹಿಯುದ್ದೀನ್ ಜುಮಾ ಮಸೀದಿ ಉಳ್ತೂರು ವಠಾರದಲ್ಲಿ ನಡೆಯಲಿರುವುದು.

ತನ್ನದೇ ಶೈಲಿಯಲ್ಲಿ ಕೇಳುವರ ಕಿವಿಯನ್ನು ಇಂಪಾಗಿಸುವ ಹಲವಾರು ಮದ್ ಹ್ ಗೀತೆಗಳನ್ನು ರಚಿಸಿ ಹಾಡುವುದರ ಮೂಲಕ ಸ್ವದೇಶಿ ವಿದೇಶಿ ಗಳಲ್ಲಿರುವ ವಿಶ್ವಾಸಿಗಳನ್ನು ಮದೀನಾ ದತ್ತ ಕೊಂಡೊಯ್ಯುವ ಆಶೀಖುರ್ರಸೂಲ್ ಬಹು: ಅಸಯ್ಯಿದ್ ತ್ವಾಹ ತಂಙಳ್ ಪೂಕಟೂರು, ಸಿಹಾನ್ ಉಳ್ಳಾಲ ಹಾಗೂ ಸಂಗಡಿಗರ ಬ್ರಹತ್ ಬುರ್ದಾ ಮಜ್ಲೀಸ್, ದರ್ಸ್ ವಾರ್ಷಿಕ ಹಾಗೂ ಏಕದಿನ ಮತ ಪ್ರಭಾಷಣ ಕಾರ್ಯಕ್ರಮ ನಡೆಯಲಿರುವುದು.

ಪ್ರಸ್ತುತ ಸಮಾರಂಭದಲ್ಲಿ ಮುಹಿಯುದ್ದೀನ್ ಜುಮಾ ಮಸೀದಿ ಗೌರವಾಧ್ಯಕ್ಷರು, ಬೆಳ್ತಂಗಡಿ ತಾಲೂಕು ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಬಹು ಅಸಯ್ಯಿದ್ ಅಬ್ದುಲ್ ರಹ್ಮಾನ್ ಸಾದತ್ ಬಾಅಲವಿ ತಂಙಳ್ ಗುರುವಾಯನಕೆರೆ ದುಹಾರ್ಶಿವಚನ ನೀಡಲಿದ್ದಾರೆ.
ಹಾಗೂ ಸ್ಥಳೀಯ ಮುದರ್ರೀಸ್ ಉಸ್ತಾದ್ ಬಹು: ಮುಹಮ್ಮದ್ ಫಾಳಿಲಿ ಕಾಮಿಲ್ ಸಖಾಫಿ ಅಲ್ ಪುರ್ಖಾನಿ ಕೊಡ್ಲಿಪೇಟೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ. ಬಹು:ನೌಫಲ್ ಸಖಾಫಿ ಕಳಸ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಗಣ್ಯ ಉಪಸ್ಥಿತರಾಗಿ ಅಲ್ ಮದ್ರಸ ತುಲ್ ಖಾದ್ರಿಯಾ ಉಳ್ತೂರು ಇದರ ಅಧ್ಯಾಪಕರುಗಳಾದ ಬಹು: ಝಕರಿಯ ಸಖಾಫಿ ಕೊಡಿಪ್ಪಾಡಿ,ಬಹು: ಕೆ.ಪಿ.ಅಹ್ಮದ್ ನಿಝಾರ್ ಝುಹ್ರಿ ಕನ್ಯಾನ ಹಾಗೂ ಇನ್ನಿತರ ಸಾದಾತುಗಳು, ಉಲೇಮಾ,ಉಮಾರ ಶಿರೋಮಣಿ ಗಳು, ಭಾಗವಹಿಸಲಿದ್ದಾರೆ.

ಈ ಒಂದು ಪುಣ್ಯ ಕಾರ್ಯಕ್ರಮ ವನ್ನು ಸಹಕರಿಸಿ ವಿಜಗೊಲಿಸಬೇಕಾಗಿ ಕೇಳಿಕೊಳ್ಳುತ್ತೇವೆ.

ಮುಹಿಯುದ್ದೀನ್ ಜುಮಾ ಮಸೀದಿ ಆಡಳಿತ ಸಮೀತಿ, ನೂರುಲ್ ಹುದಾ ದರ್ಸ್ ಸಮೀತಿ, ಗಲ್ಫ್ ಸಮೀತಿ ಎಂ ಜೆ ಎಂ,ಸ್ವಲಾತ್ ಸಮೀತಿ, ಎಸ್ ವೈ ಎಸ್, ಎಸ್ ಎಸ್ ಎಫ್,ಎಸ್ ಬಿ ಎಸ್ ಉಳ್ತೂರು.

ವಿ.ಸೂ. ಕಾರ್ಯಕ್ರಮದ ನೇರ ಪ್ರಸಾರ ವನ್ನು SJS LIVE ಇದರಲ್ಲಿ ಪ್ರಚಾರ ಮಾಡಲಾಗುತ್ತಿದೆ.

ವರದಿ ಒಮಾನ್ ಝುಹ್ರಿ

Leave a Reply

Your email address will not be published. Required fields are marked *

error: Content is protected !!