February 1, 2026

ಟ್ರ್ಯಾಕ್ಟರ್ ಹರಿದು ಸೆಕ್ಯುರಿಟಿ ಗಾರ್ಡ್ ಮೃತ್ಯು

0
image_editor_output_image-634350184-1646637470945.jpg

ಕಲಬುರಗಿ:  ಟ್ರ್ಯಾಕ್ಟರ್ ಹಾಯ್ದು ಸೆಕ್ಯುರಿಟಿ ಗಾರ್ಡ್ ಯೊಬ್ಬ ದುರ್ಮರಣಕ್ಕೀಡಾದ ಘಟನೆ ತಾಲೂಕಿನ ಮಳ್ಳಿ-ನಾಗರಳ್ಳಿ ಉಗಾರ್ ಶುಗರ್ಸ್ (ಘಟಕ-2) ಕಾರ್ಖಾನೆಯಲ್ಲಿ ರವಿವಾರ ತಡರಾತ್ರಿ ನಡೆದಿದೆ.

ಹದನೂರು ಗ್ರಾಮದ ಮಲ್ಲಿಕಾರ್ಜುನ ಜಂಡೆ (23) ಮೃತ ದುರ್ಧೈವಿ.

ಕಳೆದ ಹದಿನೈದು ದಿನಗಳ ಹಿಂದಷ್ಟೆ ಕಾರ್ಖಾನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ಸೇರಿದ್ದ ಮಲ್ಲಿಕಾರ್ಜುನ  ಎಂದಿನಂತೆ ರವಿವಾರ ರಾತ್ರಿ ಪಾಳೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ನಿದ್ದೆ ಬರುತ್ತಿದೆ ಎಂದು ಕಬ್ಬು ಹೊತ್ತುಕೊಂಡು ನಿಂತ ಟ್ರ್ಯಾಕ್ಟರ್ ಚಕ್ರದ ಮುಂದೆ ಮಲಗಿಕೊಂಡಿದ್ದಾನೆ.

ಟ್ರ್ಯಾಕ್ಟರ್ ಸರದಿ ಬಂದಾಗ ಅದರ ಚಾಲಕ ಸಹಜವಾಗಿ ವಾಹನ ಚಾಲನೆ ಮಾಡಿಕೊಂಡು ಹೋಗುವಾಗ ಚಕ್ರದಡಿ ಸಿಲುಕಿ ಒದ್ದಾಡ ತೊಡಗಿದ್ದಾನೆ.  ಚಕ್ರ ಉರುಳಲು ಕಲ್ಲು ಅಡಚಣೆ ಆಗಿರಬಹುದೆಂದು ಚಾಲಕ ವಾಹನದಿಂದ ಕೆಳಗಿಳಿದು ನೋಡಿದಾಗ ಸೆಕ್ಯುರಿಟಿ ಗಾರ್ಡ್ ಒದ್ದಾಡುತ್ತಿರುವುದನ್ನು ಕಂಡು ತಕ್ಷಣ ಅಲ್ಲಿದ್ದ ಸಿಬ್ಬಂದಿ ಗಮನಕ್ಕೆ ತಂದಿದ್ದಾನೆ.

Leave a Reply

Your email address will not be published. Required fields are marked *

error: Content is protected !!