March 22, 2026

ಪುತ್ತೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ಆರೋಪಿ ರಕ್ಷಿತ್ ಗೆ ನ್ಯಾಯಾಂಗ ಬಂಧನ

0
Screenshot_2022-03-05-18-11-18-00_680d03679600f7af0b4c700c6b270fe7.jpg

ಪುತ್ತೂರು: ಅಪ್ರಾಪ್ತೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ವಿರುದ್ಧ ಪುತ್ತೂರು ಮಹಿಳಾ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು ಆರೋಪಿನ್ನು ಬಂಧಿಸಲಾಗಿದ್ದು ಹತ್ತು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಹಾಸ್ಟೆಲ್‌ವೊಂದರಲ್ಲಿದ್ದ ಬಾಲಕಿಗೆ ಪೋನ್‌ ಮಾಡಿದ್ದು ಕರೆ ಸ್ವೀಕರಿಸಿದ ವಾರ್ಡನ್‌ಗೆ ತಾನು ಆಕೆಯ ಅಣ್ಣನೆಂದು ಪರಿಚಯಿಸಿಕೊಂಡು ಬಾಲಕಿ ಜತೆ ಮಾತನಾಡಿದ್ದಾನೆ. ಈ ವೇಳೆ ಹೊರಗಡೆ ಭೇಟಿಯಾಗುವಂತೆ ಒತ್ತಡ ಹೇರಿದಲ್ಲದೆ ಬಾರದೆ ಇದ್ದಲ್ಲಿ ಕೊಲೆ ಬೆದರಿಕೆ ಒಡ್ಡಿದ್ದಾನೆ. ಇದರಿಂದ ಭೀತಿಗೊಂಡ ಬಾಲಕಿ ಆರು ದಿನಗಳ ಹಿಂದೆ ಬೀರಮಲೆ ಗುಡ್ಡೆಯಲ್ಲಿ ರಕ್ಷಿತ್‌ನನ್ನು ಭೇಟಿಯಾಗಿದ್ದು ಈ ವೇಳೆ ಆರೋಪಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲಿಂದ ತಪ್ಪಿಸಿಕೊಂಡು ಬಂದಿರುವುದಾಗಿ ಬಾಲಕಿಯ ಹೆತ್ತವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಅಪ್ರಾಪ್ತೆಯನ್ನು  ರಕ್ಷಿತ್‌ ಪ್ರೀತಿಸುತಿದ್ದು, ಬಾಲಕಿಯ ಮನೆಯವರು ಆತನಿಗೆ ಬುದ್ದಿವಾದ ಹೇಳಿದ್ದರು. ಬಾಲಕಿಯ ತಂದೆ ರಕ್ಷಿತ್‌ ವಿರುದ್ದ ಸುಳ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಇದಾದ ಬಳಿಕವು ಈತ ಪದೇ ಪದೇ ಕರೆ ಮಾಡುತ್ತಿದ್ದ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!