ಉಳ್ಳಾಲ ದರ್ಗಾಕ್ಕೆ ಕ್ರೈಸ್ತ ಕನ್ಯಾ ಸ್ತ್ರೀಯರ ಭೇಟಿ
ಉಳ್ಳಾಲ: ಪಂಚವಾರ್ಷಿಕ ಉರುಸ್ ಹಿನ್ನೆಲೆಯಲ್ಲಿ ದರ್ಗಾಕ್ಕೆ ಬುಧವಾರ ಉಳ್ಳಾಲದ ನಿರ್ಮಲ ಕಾನ್ವೆಂಟ್‌ನ ಕನ್ಯಾ ಸ್ತ್ರೀಯರ ನಿಯೋಗ ಮದರ್ ಸುಪಿರಿಯರ್ ಅಲ್ಫೋನ್ಸ ನೇತೃತ್ವದಲ್ಲಿ ಭೇಟಿ ನೀಡಿತು.
ಪ್ರಾರ್ಥನೆಯ ನಂತರ ನಿಯೋಗದಲ್ಲಿದ್ದ ಕ್ರೈಸ್ತ ಕನ್ಯಾ ಸ್ತ್ರೀಯರನ್ನು ಅಧ್ಯಕ್ಷರ ಕಚೇರಿಯಲ್ಲಿ ದರ್ಗಾ ಪರಂಪರೆಯಂತೆ ಅಧ್ಯಕ್ಷ ಅಬ್ದುಲ್ ರಶೀದ್ ಗೌರವಿಸಿದರು. ಈ ಸಂದರ್ಭ ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯಿಲ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಯು.ಕೆ.ಇಬ್ರಾಹಿಂ, ದರ್ಗಾ ಆಡಳಿತ ಸಮಿತಿ ಸದಸ್ಯರಾದ ಹಮೀದ್ ಕೋಡಿ, ಅಬ್ದುಲ್ ಜಬ್ಬಾರ್, ಟ್ರಸ್ಟಿಗಳಾದ ಯುಸೂಫ್ ಉಳ್ಳಾಲ್, ಅಹಮದ್ ಬಾವ ಕೊಟ್ಟಾರ, ಕೋಟೆಪುರ ಜುಮ್ಮಾ ಮಸೀದಿ ಅಧ್ಯಕ್ಷ ಯು.ಕೆ.ಅಬ್ಬಾಸ್, ಕಬೀರ್ ಬುಖಾರಿ ಮುತಾದವರು ಉಪಸ್ಥಿತರಿದ್ದರು.




